ಬೆಂಗಳೂರು: ದೆಹಲಿ ಕನ್ನಡ ಸಂಘ, ಕನ್ನಡ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ದೆಹಲಿಯಲ್ಲಿ ಜಾನಪದ ಸಮ್ಮೇಳನ ಮಾಡಲು ಚಿಂತಿಸಲಾಗುವುದು ಎಂದು
ದೆಹಲಿ ಕನ್ನಡ ಸಂಘದ ಜಂಟಿ ಕಾರ್ಯದರ್ಶಿ ಸಂತೋಷ್ ಕುಮಾರ್ ತಿಳಿಸಿದರು.
ಶುಕ್ರವಾರ ಬೆಂಗಳೂರು ನಗರದ ಲಗ್ಗೆರೆಯ ಕನ್ನಡ ಪರಿಷತ್ತಿನ ಜಾನಪದ ಕುಟೀರಕ್ಕೆ ಭೇಟಿ ನೀಡಿ ಅವರು ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಅವರನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಅಭಿನಂದಿಸಿ ಗೌರವಿಸಿದರು.
ಕನ್ನಡ ಜಾನಪದ ಪರಿಷತ್ತಿನ ಬೆಂಗಳೂರಿನ ಜಿಲ್ಲಾ ಅಧ್ಯಕ್ಷರು ಕೆ ಸಿ ಕಾಂತಪ್ಪ, ಅಂತರಾಷ್ಟ್ರ ಜನಪದ ಕಲಾವಿದ ನೆಲೆಸೊಗಡು ಲಕ್ಷ್ಮಣ್, ಜಾನಪದ ಯುವ ಬ್ರಿಗೇಡ್ ಸಾಗರ ತಾಲೂಕು ಸಂಚಾಲಕ ಮೇಲ್ವಿನ್ ಗೊನ್ಸಲವೀಸ್ ಉಪಸ್ಥಿತರಿದ್ದರು.
