ಮಂಡ್ಯ: ಎಳನೀರು ತುಂಬಿದ ಬೊಲೇರೋ ವಾಹನ ಉರುಳಿದ ಪರಿಣಾಮ ರಸ್ತೆಯಲ್ಲೆಲ್ಲಾ ಎಳನೀರು ಚೆಲ್ಲಾಡಿತಲ್ಲದೆ
ಒಬ್ಬ ಮೃತಪಟ್ಟು,ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ತಾಲೂಕು ಹಳೆ ಬೂದನೂರು ಬಳಿ ನಡೆದಿದೆ.
ಅಪಘಾತದ ದೃಶ್ಯ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದ್ದೂರು ತಾಲೂಕು ಬನ್ನಹಳ್ಳಿಯ ರಮೇಶ್(45) ಮೃತ ದುರ್ದೈವಿ, ಶಿವನಂಜೇಗೌಡ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ಶಿವನಂಜೇಗೌಡರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
