ಮುಂಬೈ: ಮುಂಬೈ ನಲ್ಲಿ ಮಂಗಳೂರು ಕಥಾಬಿಂದು ಪ್ರಕಾಶನ ಹಮ್ಮಿಕೊಂಡಿದ್ದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಕೃತಿಗಳ ಬಿಡುಗಡೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲೆಯ ಶಂಕರಪುರ ಗ್ರಾಮದ ಲೇಖಕಿ ನೀಮ ಲೋಬೊ ಅವರ ಮನಸ್ಸೇ ಜೋಪಾನ ಎಂಬ ಕೃತಿ ಬಿಡುಗಡೆ ಮಾಡಲಾಯಿತು.
ಎಲ್ಲಾ ಗಣ್ಯರ ಸಮ್ಮುಖದಲ್ಲಿ ಹಲವಾರು ಜಿಲ್ಲೆಗಳಿಂದ ಆಯ್ಕೆಯಾಗಿದ್ದ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಾದ ಉಡುಪಿ ಜಿಲ್ಲೆಯ ಸರ್ವಕಲ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಕೃಷಿ ತಜ್ಞರಾದ ಡಾ. ಜೋಸೆಫ್ ಲೋಬೊ ಉಡುಪಿ,ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಮೈಸೂರು, ಕರಾಟೆ ಮಾಸ್ಟರ್ ಶ್ರೀ ಶಿಹಾನ್ ಸುರೇಶ್ ಆಚಾರ್ಯ ಶಂಕರಪುರ ಅವರುಗಳಿಗೆ ಅವರ ಸಾಧನೆಯನ್ನು ಗುರುತಿಸಿ ಸಾಧನಾಶ್ರೀ ರಾಷ್ಟ್ರ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವೀಣ್ ಬೋಜ ಶೆಟ್ಟಿ ಅವರು ವಹಿಸಿದ್ದರು. ಉದ್ಘಾಟನೆಯನ್ನು ಸುರೇಂದ್ರ ಶೆಟ್ಟಿ ಅವರು ನೆರವೇರಿಸಿದರು.
ಕೃತಿಗಳ ಅನಾವರಣವನ್ನು ಶಂಭು ಸುನಿಲ್ ಅವರು ಮಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀದೇವಿ ಮುಂಬೈ ವ್ಯವಸ್ಥಾಪಕ ನಿರ್ದೇಶಕರು ಚಂದ್ರಶೇಖರ್ ರಾವ್ ಮೆಮೋರಿಯಲ್ ಟೆಸ್ಟ್, ಮಧುಸೂದನ್ ಆರ್ ಅಧ್ಯಕ್ಷರು ಕನ್ನಡ ಕಲಾ ಕ್ಷೇತ್ರ, ಡಾ. ಸತೀಶ್ ಎನ್ ಬಂಗೇರ ಬಹುಮುಖ ಪ್ರತಿಭೆ ಆರ್ಯ ಭಟ್ ಪ್ರಶಸ್ತಿ ಪುರಸ್ಕೃತರು, ಡಾ. ಗೋವಿಂದ ಭಟ್ ಹಿರಿಯ ನಾಯಕರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಪ್ರತಿಭೆಗಳನನ್ನು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು, ಗೌರವಿಸುವುದು ಕನ್ನಡ ಕಂಪು ಕಾರ್ಯಕ್ರಮದ ಮೂಲ ಉದ್ದೇಶ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
