ಚಾಮರಾಜನಗರ: ಅಕ್ರಮವಾಗಿ ಜಮೀನಿನ ಶೆಡ್ ನಲ್ಲಿ ಸಂಗ್ರಹಿಸಿಟ್ಟಿದ್ದ ಜಿಂಕೆ,ಸಾರಂಗದ ಕೊಂಬುಗಳು,ಮತ್ತಿತರ ವಸ್ತುಗಳನ್ನು ಜಿಲ್ಲೆಯ ಬಂಡೀಪುರ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕೆಬ್ಬೆಪುರ ಗ್ರಾಮದ ಸರ್ವೇ ನಂ. 116ರ ಜಮೀನಿನಲ್ಲಿ ಕುಂದುಕೆರೆ ಹಾಗೂ ಜಿ.ಎಸ್. ಬೆಟ್ಟ ವಲಯ
ಅರಣ್ಯಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದ್ದಾರೆ.
ಆಗ ಜಮೀನನ ಶೆಡ್ನಲ್ಲಿ ಹಾಗೂ ಮನೆಯಲ್ಲಿ ಒಟ್ಟು 48 ಸಂಖ್ಯೆ ಜಿಂಕೆ/ ಸಾರಂಗದ ಕೊಂಬುಗಳು,ಜಿಂಕೆ 2 ಕೊಂಬುಗಳುಳ್ಳ ಜಿಂಕೆಯ ತಲೆ ಬುರುಡೆ,2 ಸಂಖ್ಯೆ ಪ್ರಾಣಿಯ ಚರ್ಮದ ಹೊದಿಕೆ, 1 ಹಳೆಯ ರಿವಾಲ್ವರ್, 3 ಸ್ಪೋರ್ಟ್ಸ್ ಗನ್ಗಳು, 1 ರೈಫಲ್, ಮದ್ದು ಗುಂಡುಗಳು, ನವಿಲು ಗರಿಗಳು ಹಾಗೂ ಬ್ಲಡ್ ಅಳವಡಿಸಿದ್ದ ತಂತಿ, ಐ.ಆರ್ ಕ್ಯಾಮೆರಾಗಳು 2, ಹಾಗೂ ಇನ್ನಿತರೆ ವಸ್ತುಗಳನ್ನು ಅಕ್ರಮವಾಗಿ ಇರಿಸಿಕೊಂಡಿಸಿರುವುದು ಕಂಡುಬಂದಿದ್ದು, ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳದಲ್ಲಿದ್ದ ಸುರೇಶ್ ಪರಿಯಾರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಈ ವೇಳೆ ಆತ ಸರ್ವೇ ಸಂ. 116ರ ಜಮೀನು ಸೆನೆಟಿಲಾ ಲಾಂಗ್ ಕುಮೆರ ಅವರ ಹೆಸರಿನಲ್ಲಿದ್ದು, ಮನೆಯಲ್ಲಿ ಸಿಕ್ಕಿರುವ ವಸ್ತುಗಳು ಕರ್ನಲ್ ಜಾಕೋಬ್, ಸಂಖ್ಯೆ 77 ವರೆಸೋವ, ಲೇಔಟ್, ಸಿವಿ ರಾಮನ್ ನಗರ, ಬೆಂಗಳೂರು ಅವರಿಗೆ ಸೇರಿದ್ದು ಎಂಬುದಾಗಿ ಬಾಯಿ ಬಿಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿಯಲ್ಲಿ ಮೇಲ್ಕಂಡ ಮೂವರ ವಿರುದ್ಧ ನಿಸಾರ್ ಅಹಮದ್, ಪಿ.ಕೆ, ಕುಂದುಕೆರೆ ವಲಯ ಇವರು ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಸುರೇಶ್ ಪೆರಿಯಾರ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ವಹಿಸಲಾಗಿದೆ ಹಾಗೂ ಉಳಿದಿಬ್ಬರ ಶೋಧ ಕಾರ್ಯ ನಡೆದಿದೆ.
ಈ ಪ್ರಕರಣವನ್ನು ಶುಭಂ ಸಿಂಗ್ ತನ್ವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬಂಡೀಪುರ ಉಪವಿಭಾಗ, ನಿರ್ದೇಶಕರು (ಪ್ರಭಾರ), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಇವರ ನಿರ್ದೇಶನದ ಮೇರೆಗೆ ನಿಸಾರ್ ಅಹಮದ್, ಪಿ.ಕೆ, ಕುಂದುಕೆರೆ ವಲಯ,ಕೆ. ಪಿ. ಸತೀಶ್ ಕುಮಾರ್, ವಲಯ ಅರಣ್ಯಾಧಿಕಾರಿ, ಜಿ.ಎಸ್. ಬೆಟ್ಟ ವಲಯ ಮತ್ತು ವಿಶೇಷ ಹುಲಿ ಸಂರಕ್ಷಣಾ ದಳ, ಹಾಗೂ ಜಿ.ಎಸ್. ಬೆಟ್ಟ ವಲಯದ ಕ್ಷೇತ್ರ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
