ಮೈಸೂರು: ಮೈಸೂರಿನ ಎನ್.ಐ.ಇ ಕಾಲೇಜಿನ ಎರಡೂ ಕ್ಯಾಂಪಸ್ಗಳಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು 465 ಯುನಿಟ್ ರಕ್ತ ಸಂಗ್ರಹವಾಗಿದೆ.
ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋಟರಿ ಕ್ಲಬ್ ಮೈಸೂರು ಸಹಯೋಗದಲ್ಲಿ ದಕ್ಷಿಣ ಕ್ಯಾಂಪಸ್ನಲ್ಲಿ 250 ಯುನಿಟ್ ಮತ್ತು ಉತ್ತರ ಕ್ಯಾಂಪಸ್ನಲ್ಲಿ 215 ಯುನಿಟ್ ಸಂಗ್ರಹವಾಗಿದೆ.
ದಕ್ಷಿಣ ಕ್ಯಾಂಪಸ್ನಲ್ಲಿ ಪ್ರಾಂಶುಪಾಲ ಡಾ. ನಾಗೇಂದ್ರ ಪರಾಶರ್ ಮತ್ತು ಉತ್ತರ ಕ್ಯಾಂಪಸ್ನಲ್ಲಿ ಉಪ ಪ್ರಾಂಶುಪಾಲ ಡಾ. ಲಿಖಿತ್ ಕುಮಾರ್ ಅವರು ಶಿಬಿರಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿನಿಯರ ಉತ್ಸಾಹ ಗಮನ ಸೆಳೆಯಿತು. ಸಂಗ್ರಹವಾದ ರಕ್ತದಿಂದ ಸುಮಾರು 1,400 ಜನರ ಜೀವ ಉಳಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
