ಯಳಂದೂರು: ಕೊಳ್ಳೇಗಾಲ ಕೇತ್ರದ ಜೆ ಡಿ ಎಸ್ ಅಧ್ಯಕ್ಷ ಹಾಗೂ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿ ಬಿ. ಪುಟ್ಟಸ್ವಾಮಿಯವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಜೆ ಡಿ ಎಸ್ ಕಾರ್ಯಕರ್ತರು ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ಹಾಗೂ ಹಾಲನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜೆ ಡಿ ಎಸ್ ತಾಲೋಕು ಅಧ್ಯಕ್ಷ ಆನಂದ ಮಾತನಾಡಿ, ಬಿ. ಪುಟ್ಟಸ್ವಾಮಿ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಕಳೆದ ವಿಧಾನಸಬೆ ಚುನಾವಣೆಯಲ್ಲಿ ಜೆ ಡಿ ಎಸ್ ಪಕ್ಷದ ಅಭ್ಯರ್ಥಿ ಯಾಗಿ ಸ್ವರ್ಧಿಸಿ, ಒಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಜೊತೆಗೆ ಪಕ್ಷ ಸಂಘಟನೆ ಮಾಡುತ್ತಾ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವರ 51ನೇ ಹುಟ್ಟು ಹಬ್ಬವನ್ನು ಅವಿಸ್ಮರಣೀಯ ಮಾಡುವ ನಿಟ್ಟಿನಲ್ಲಿ ನಾವು ರೋಗಿಗಳಿಗೆ ಹಣ್ಣು,ಹಾಲು ವಿತರಣೆ ಮಾಡಿದ್ದೇವೆ ಎಂದು ಹೇಳಿದರು.
ಪಟ್ಟಣದ ಜೆ ಡಿ ಎಸ್ ಮುಖಂಡ ಚಂದ್ರಶೇಖರ ಮಾತನಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಂಬಳೆ ರಾಜಣ್ಣ, ಶಿವಮೂರ್ತಿ, ನಟರಾಜ್,ಅಲ್ಕೆರೆ ಅಗ್ರಹಾರ ಸಿದ್ದರಾಜು, ಗುಂಬಳ್ಳಿ ನಾಗರಾಜ್, ಜಿ ಕೆ. ನಾಗರಾಜು, ವಡಗೆರೆ ಸುಂದರ, ಗುರುಲಿಂಗಯ್ಯ, ತೇಜಸ್ವಿನಿ ಮಹೇಶ್, ರಾಜೇಶ್ವರಿ,ದಿವ್ಯ,ಸೋಫಾನಿ, ಡಾ. ಶ್ರೀಧರ್, ಡಾ. ಶಶಿರೇಖಾ ಸೇರಿದಂತೆ ಅಭಿಮಾನಿಗಳು, ಜೆ ಡಿ ಎಸ್ ಕಾರ್ಯಕರ್ತರು ಹಾಜರಿದ್ದರು.
