ಮೈಸೂರು: ಪರಿಸರ ದಿನಾಚರಣೆ ಭಾವನಾತ್ಮಕ ಹಬ್ಬವಾಗಿ ಆಚರಣೆಗೆ ಸರ್ವರು ನಿತ್ಯ ಸಿದ್ಧರಾಗುವುದು ಅವಶ್ಯವಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ತಿಳಿಸಿದರು.
ವಾರ್ಡ್ ನಂಬರ್ 55ರ ಕಾರ್ಯಕರ್ತರು ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ನೇತೃತ್ವದಲ್ಲಿ ವಿದ್ಯಾರಣ್ಯಪುರಂನಲ್ಲಿರುವ ಹಾವಿನ ಪಾರ್ಕ್ ನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರವನ್ನು ನಾವು ಕೇವಲ ಹಸಿರಿಗಾಗಿ ಅಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಣೆ ಮಾಡಬೇಕು,ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಇದು ಮಾನವನಿಂದಲೇ ಸರಿಯಾಗಬೇಕಿದೆ ಎಂದು ಹೇಳಿದರು.
ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ,ಪರಿಸರ, ಪಕೃತಿ ನಮಗೆ ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಆದರೆ ನಾವು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ, ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳಬೇಕಿದೆ ಎಂದು ರಾಮಪ್ರಸಾದ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜ್ ಅರಸ್,
ವಾರ್ಡ್ ಅಧ್ಯಕ್ಷರಾದ ಉಮಾಶಂಕರ್, ನಗರಪಾಲಿಕೆ ಮಾಜಿ ಸದಸ್ಯರಾದ ವಿದ್ಯಾ ಅರಸ್, ಬಿಜೆಪಿ ಮುಖಂಡರುಗಳಾದ ಮಂಜುನಾಥ್ ವಿ, ಸೋಮೇಶ್, ಧರ್ಮೇಂದ್ರ, ರವಿ, ಮಧು, ನಿರಂಜನ್, ಶಿವು, ಡಿ ಸಿ ಮಂಜುಳಾ, ವಿಜಯ, ಕಾವ್ಯ, ಅರ್ಪಿತ, ರಮೇಶ್ ಅರಸ್ ಮತ್ತು ವಾರ್ಡ್ ನ ಮುಖಂಡರು ಭಾಗಿಯಾಗಿದ್ದರು.
