ಮೈಸೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಯಿತು.
ಶ್ರೀ ಮೃತ್ಯುಂಜಯೇಶ್ವರ ಸ್ವಾಮಿಗೆ ಮುಂಜಾನೆ ಪಂಚಾಮೃತ ಅಭಿಷೇಕ ನೇವೇರಿಸಿ ಮಹಾ ಪೂಜೆಯನ್ನು ಶಿವಾರ್ಚಕರಾದ ಎಸ್.ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ನೆರವೇರಿಸಿದರು.
ನಂತರ ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ತರಹೇವಾರಿ ಹೂಗಳು,ಸುಗಂಧದ್ರವ್ಯಗಳು,ಆಭರಣಗಳಿಂದ ಅಲಂಕರಿಸಲಾಯಿತು.
ಶಿವಲಿಂಗುವಿಗೆ ಭಸ್ಮಖಚಿತ ವಿವಿಧ ಬಣ್ಣಗಳಿಂದ ಅಲಂಕರಿಸಲಾಗಿದ್ದು ಭಕ್ತರು ಬೆಳಗಿನಿಂದಲೇ ದೇವಾಲಯಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಇತ್ತ ದೇವಿ ಪಾರ್ವತಿಗೆ ಅಭಿನಂದನ್ ಅವರು ಅಧರ್ನಾರೀಶ್ವರ ಅಲಂಕಾರ ಮಾಡಿದ್ದು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.
ಬಗೆ,ಬಗೆಯ ಹೂಗಳು,ಬೆಳ್ಳಿಯ ಕಿರೀಟ,ಆಭರಣಗಳಿಂದ ದೇವಿ ಶಿವನೊಂದಿಗೆ ಕಂಗೊಳಿಸುತ್ತಿದ್ದಾಳೆ.
