ಮಂಡ್ಯ: ಮಂಡ್ಯದಲ್ಲಿ ನಡೆದಿದ್ದ ಅರ್ಚಕನ ನಿಗೂಢ ಕೊಲೆ ಪ್ರಕರಣವನ್ನ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿಯ ಅನೈತಿಕ ಸಂಬಂಧವೇ ಅರ್ಚಕನ ಕೊಲೆಗೆ ಕಾರಣ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಪ್ರಿಯಕರನ ಮೂಲಕ ಪತಿ ಅರ್ಚಕನನ್ನು ಪತ್ನಿಯೇ ಹತ್ಯೆ ಮಾಡಿಸಿದ್ದು,ಕೊಲೆ ಸಂಬಂಧ
ಪತ್ನಿ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಅರ್ಚಕನ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಟಿಪ್ಪರ್ ಡ್ರೈವರ್ ಹರೀಶ, ಸ್ನೇಹಿತರರಾದ ಗಣೇಶ, ಸಂತೋಷ್ ಕುಮಾರ್ ಬಂಧಿತ ಆರೋಪಿಗಳು.
ಮಾ.6ರಂದು ಮರಳಗಾಲ ಗ್ರಾಮದ ಬಳಿ ಅರ್ಚಕ ಸಿದ್ದಲಿಂಗಪ್ಪನನ್ನು ಹತ್ಯೆ ಮಾಡಲಾಗಿತ್ತು.
ಸಿದ್ದಲಿಂಗಪ್ಪ ಅಕ್ಕನ ಮಗಳನ್ನೇ ಮದುವೆಯಾಗಿದ್ದರು.ಆದರೆ ವಂಚಕಿ ಪತ್ನಿ ಶಾಲಿನಿ ಅದೇ ಗ್ರಾಮದ ಹರೀಶನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.
ಒಮ್ಮೆ ಶಾಲಿನಿ-ಹರೀಶ ಇಬ್ಬರು ಜೊತೆಯಲ್ಲೇ ಮನೆಯಲ್ಲಿ ಸಿಕ್ಕಿಬಿದ್ದಿದ್ದರು.ಅಂದಿನಿಂದ ಆಗಾಗ ದಂಪತಿ ನಡುವೆ ಜಗಳ ಆಗುತ್ತಿತ್ತು.
ಇದರಿಂದ ಸಂಬಂಧಕ್ಕೆ ತೊಂದರೆಯಾಯಿತೆಂದು ಶಾಲಿನಿ ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆಗೆ ಸ್ಕೆಚ್ ಹಾಕಿದ್ದಳು.
ಪ್ರೇಯಿಸಿಯ ಮಾತು ನಂಬಿ ತನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಸಿದ್ದಲಿಂಗಪ್ಪನನ್ನು ಹತ್ಯೆ ಮಾಡಿದ್ದ ಹರೀಶ,ಹತ್ಯೆ ಬಳಿಕ ಶವವನ್ನ ನಾಲೆಗೆ ಬಿಸಾಡಿ ಅಪಘಾತದ ನಾಟಕವಾಡಿದ್ದ.ಅಸ್ಟೇ ಅಲ್ಲಾ
ಮೃತನ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದ.
ಪೊಲೀಸರ ತನಿಖೆ ವೇಳೆ ಅಕ್ರಮ ಸಂಬಂಧದಿಂದಲೇ ಹತ್ಯೆ ಎಂಬುದು ಸಾಬೀತಾಗಿದೆ.
