ಮೈಸೂರು: ಇಂದಿನ ಯುವ ಪೀಳಿಗೆ ಪಂಚಾಂಗ ಓದಿ ಸನಾತನ ಧರ್ಮದ ಮಹತ್ವ ತಿಳಿದುಕೊಳ್ಳಬೇಕು ಎಂದು ಇತಿಹಾಸ ತಜ್ಞರಾದ ಶೆಲ್ವಪಿಳೈ ಅಯ್ಯಂಗಾರ್ ಸಲಹೆ ನೀಡಿದರು.
ಮೈಸೂರಿನ ಕೃಷ್ಣಮೂರ್ತಿಪುರಂನ
ಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಒಂಟಿಕೊಪ್ಪಲ್ ಪಂಚಾಂಗಕ್ಕೆ ಪೂಜೆ ಸಲ್ಲಿಸಿ ನಂತರ ಪಂಚಾಂಗ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಆಚರಣೆಗಳು ಬೆಳವಣಿಗೆಗಳ ಬಗ್ಗೆ ಮೊದಲೇ ಕಾಲನಿರ್ಣಯ ಪ್ರಕಾರವಾಗಿ ಪಂಚಾಂಗದಲ್ಲಿ ಉಲ್ಲೇಖಿತವಾಗಿರುತ್ತದೆ, ಪಂಚಾಂಗದಲ್ಲಿ ಮಾಸ, ಪಕ್ಷ, ತಿಥಿ, ನಕ್ಷತ್ರ ಗಳಿಗೆ ಕಾಲನಿರ್ಣಯದಂತೆ ಹಿಂದೂಗಳು ಪಾಲಿಸುವಂತಾಗಬೇಕು ಎಂದು ತಿಳಿಸಿದರು.
ಹಿಂದೂ ಸನಾತನ ಸಂಪ್ರದಾಯದಲ್ಲಿ ಪಂಚಾಂಗ ಶ್ರವಣ ಮತ್ತು ಪಂಚಾಂಗದಂತೆ ಮುಹೂರ್ತ ಪಾಲಿಸುವುದಕ್ಕೆ ರಾಮಾಯಣ ಮಹಾಭಾರತ ಕಾಲ ಸೇರಿ ಸಾವಿರಾರು ವರ್ಷಗಳ ಇತಿಹಾಸವಿದೆ, ಇಂದಿನ ಯುವ ಪೀಳಿಗೆ ಹೆಚ್ಚಾಗಿ ಪಂಚಾಂಗ ಓದಿ ಸನಾತನ ಧರ್ಮದ ಮಹತ್ವ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ರಘುರಾಮ್ ವಾಜಪಾಯಿ ಅವರು ಮಾತನಾಡಿ, ಸೂರ್ಯಮಂಡಲದಲ್ಲಿ ನಡೆಯುವ ಗ್ರಹಣ ಮತ್ತು ಪ್ರವಾಹಗಳು,ಯುದ್ಧ ಬಗ್ಗೆ ಸಹ ಪಂಚಾಂಗದಲ್ಲಿ ಮೊದಲೇ ಬರೆದಿರುತ್ತಾರೆ ಎಂದರೆ ಇದರಲ್ಲಿರುವ ಜ್ಯೋತಿಷ್ಯ ವಿಜ್ಞಾನದ ಶಕ್ತಿ.ಒಂಟಿಕೊಪ್ಪಲ್ ಪಂಚಾಂಗಕ್ಕೆ ವಿದೇಶದಲ್ಲೂ ಸಹ ಭಾರಿ ಬೇಡಿಕೆ ಇದೆ, ಗ್ರಾಮದೇವರ ಜಾತ್ರೆಯಿಂದ ಶಾಂತಿ ಮಂತ್ರದವರೆಗೂ ಮಾಹಿತಿಗಳಿವೆ ಸಮಸ್ಥ ಜೀವಸಂಕುಲಕ್ಕೂ ಪಂಚಗ ಉಪಯುಕ್ತವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜತ್ತಿ ಪ್ರಸಾದ್, ಪುರೋಹಿತರುಗಳಾದ ಸೋಮಶೇಖರ್, ರಾಧಕೃಷ್ಣ, ಗುರುಪ್ರಸಾದ್, ಉದಯ್, ಮತ್ತಿತರರು ಹಾಜರಿದ್ದರು.
