ಮೈಸೂರು: ಜಗತ್ತಿನ ಮಹಾ ಜ್ಞಾನಿಗಳಲ್ಲಿ ಒಬ್ಬರಾದ ಸರ್ವಜ್ಞರು ಯಾವ ಜಾತಿ ಧರ್ಮಕ್ಕೂ ಸೀಮಿತರಾಗದೆ ವಿಶ್ವಮಾನರಾದರು ಎಂದು ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ಯದುನಂದನ್ ತಿಳಿಸಿದರು.
ಮೈಸೂರಿನ ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ವತಿಯಿಂದ ಅಗ್ರಹಾರ ವೃತ್ತದಲ್ಲಿ ಸರ್ವಜ್ಞ ಜಯಂತಿ ಅಂಗವಾಗಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿ ಅವರು ಮಾತನಾಡಿದರು.
ತಮ್ಮ ತ್ರಿಪದಿಗಳ ಮೂಲಕ ನೇರವಾಗಿ ಮಾನವ ಸಂಕುಲಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ಸರ್ವಜ್ಞರು ತಿಳಿಸಿದ್ದಾರೆ. ತ್ರಿಪದಿಗಳನ್ನು ಓದುವುದರಿಂದ ನಮ್ಮ ಜ್ಞಾನ ಭಂಢಾರ ಹೆಚ್ಚುತ್ತದೆ ಎಂದು ತಿಳಿಸಿದರು.
ಸರ್ವಜ್ಞ ವಚನಗಳನ್ನು ದಿನಕ್ಕೊಂದು ವಚನದಂತೆ ಮಕ್ಕಳಿಗೆ ಭೋದಿಸಬೇಕು ಹಾಗೂ ಪತ್ರಿಕೆಗಳಲ್ಲೂ ಸಹ ದಿನಕ್ಕೊಂದು ಸರ್ವಜ್ಞರ ವಚನ ಬಿತ್ತರಗೊಳ್ಳಬೇಕು ಎಂದು
ಯದುನಂದನ್ ಸಲಹೆ ನೀಡಿದರು.
ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್,ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಮೈಸೂರು ನಗರ ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಕಾಂಗ್ರೆಸ್ ಯುವ ಮುಖಂಡ ಜಿ ರಾಘವೇಂದ್ರ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೆ ಎಂ ನಿಶಾಂತ್, ಯಶ್ವಂತ್, ನಾಗರಾಜ್, ಮಹದೇವಸ್ವಾಮಿ, ಉದ್ಯಮಿ ಕುಮಾರ ಆರಾಧ್ಯ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
