ಅಪ್ಪು ಅಭಿನಯದ ಸೂಪರ್ ಹಿಟ್ ಚಿತ್ರ ‘ಆಕಾಶ್’ ಮತ್ತೆ ತೆರೆಗೆ ಬರಲಿದ್ದು,ಪುನೀತ್ ಅಭಿಮಾನಿಗಳು ಖುಷ್ ಆಗಿದ್ದಾರೆ.
ಸ್ಯಾಂಡಲ್ವುಡ್ ‘ಪವರ್ ಸ್ಟಾರ್’ ದಿವಂಗತ ಪುನೀತ್ ರಾಜ್ಕುಮಾರ್ ಅಭಿನಯದ ಆಕಾಶ್ ಚಿತ್ರ ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ‘ ಮಾರ್ಚ್ 13ರಂದು ಮರು ಬಿಡುಗಡೆಯಾಗುತ್ತಿದೆ.
ಸ್ಯಾಂಡಲ್ವುಡ್ನ ‘ಪವರ್ ಸ್ಟಾರ್’ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಮಾರ್ಚ್ 17ರಂದು.
ಹಾಗಾಗಿ ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ‘ಆಕಾಶ್’ ಚಿತ್ರ ಮಾರ್ಚ್ 13ರಂದು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.
ನೀನೆ ನೀನೆ… ನನಗೆಲ್ಲಾ ನೀನೆ… ಮಾತು ನೀನೆ ಮನಸೆಲ್ಲಾ ನೀನೆ ಎಂದು ಅಡಿಬರಹ ಬರೆದು ‘ಆಕಾಶ್’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕಯಮಾರ್ ಅವರು, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಚಿತ್ರದ ಬಿಡುಗಡೆ ಕುರಿತಂತೆ ಮಾಹಿತಿ ನೀಡಿದ್ದಾರೆ.
