ಮೈಸೂರು: ಖ್ಯಾತ ಯೋಗ ಗುರು ಡಾಕ್ಟರ್ ರಾಘವೇಂದ್ರ ಪೈ ಅವರನ್ನು ಅಮೆರಿಕದ ವ್ಯಾಸಭಾರತಿ ತ್ರಿಯೋಗ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ನೇಮಕ ಮಾಡಿದ್ದು,
ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಾಲ್ ಬಹುದ್ದೂರ್ ಶಾಸ್ತ್ರಿ ನಗರದಲ್ಲಿರುವ ಅವರ ಯೋಗ ಕೇಂದ್ರದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್,ಅಮೆರಿಕದ ವ್ಯಾಸಭಾರತಿ ತ್ರಿಯೋಗ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕವಾಗಿರುವುದು ಮೈಸೂರಿಗೆ ಹೆಮ್ಮೆ ಎಂದು ಹೇಳಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಸಂದೇಶ್ ಪವರ್, ಆರ್ ಗಗನ್ ಗೌಡ, ಚಂದ್ರು, ಮುರಳಿ ಮತ್ತಿತರರು ಯೋಗ ಗುರುಗಳಿಗೆ ಶುಭಕೋರಿದರು.
