ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಶೀಘ್ರ ಹೊರಬರಲೆಂದು ಹಾರೈಸಿ ದರ್ಶನ್ ಅಭಿಮಾನಿಗಳು ಪೂಜೆ ಸಲ್ಲಿಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಸಿದ್ದಾರ್ಥ ನಗರದಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಸಮಾಜ ಸೇವಕರಾದ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ ಅವರ ನೇತೃತ್ವದಲ್ಲಿ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ದರ್ಶನ್ ಅವರ ಬೃಹತ್ ಕಟೌಟಿಗೆ ಕುಂಬಳಕಾಯಿಂದ ದೃಷ್ಟಿ ತೆಗೆಯಲಾಯಿತು.
ಆ ನಂತರ ಅಭಿಮಾನಿಗಳಿಗೆ ಮಜ್ಜಿಗೆ, ಸಿಹಿ ವಿತರಿಸಿ ಡಿ ಬಾಸ್ ಸಂಕಷ್ಟದಿಂದ ಬೇಗ ಹೊರಗೆ ಬರಲಿ ಎಂದು ಹಾರೈಸಿ ಡಿ ಬಾಸ್ ಗೆ ಜೈಕಾರ ಕೂಗಿದರು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ,
ದರ್ಶನ್ ಅವರಿಗೆ ಅಂಟಿರುವ ಕಳಂಕದಿಂದ ನಿರ್ದೋಷಿಯಾಗಿ ಬೇಗ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಿಗೂ ಇದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಜ್ಯದ್ಯಂತ ಅರ್ಥಪೂರ್ಣವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಬಿಸಿಲಿನ ತಾಪದಿಂದ ಓಡಾಡುವ ವಾಹನ ಸವಾರಿರಿಗೆ ಮಜ್ಜಿಗೆ ನೀಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದದ್ದೇವೆ ಎಂದು ತಿಳಿಸಿದರು.
ಈ ಮೂಲಕ ದರ್ಶನ್ ಅವರು ಬೇಗ ನಿರ್ದೋಷಿಯಾಗಿ ಹೊರಗೆ ಬಂದು ಮತ್ತೆ ಚಿತ್ರರಂಗದಲ್ಲಿ ಕಾಣಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.
ಮುಂದಿನ ವರ್ಷ 50ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಆಚರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್,ಅಮಿತ್, ಅಶ್ವಥ್, ನಾಗರಾಜು ಹಾಗೂ ಅಭಿಮಾನಿಗಳು ಹಾಜರಿದ್ದರು.
