ಮೈಸೂರು: ಮೈಸೂರಿನ ಲಷ್ಮಿಪುರಂ ಪೋಸ್ಟ್ ಆಫೀಸ್ ಮುಂದೆ ಭಾರತೀಯ ಕಿಸಾನ್ ಸಂಘದವರು ಅಂಚೆ ಚಳವಳಿ ನಡೆಸಿ,ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೋರು ಮಾತನಾಡಿ, ಉತ್ತಮ ಮಳೆ ಇಲ್ಲದೇ ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ ಮುಖ್ಯಮಂತ್ರಿಗಳು ತುರ್ತು ಮಳೆಯಶ್ರೀತ ಮತ್ತು ನೀರಾವರಿ ಜಮೀನಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ರೈತರಿಗೆ ಎಕರೆಗೆ 50,000 ರೂಪಾಯಿ ನಿಗದಿ ಮಾಡಬೇಕು, ರೈತರ ಜೀವನ ಉಪಯೋಗಕ್ಕಾಗಿ ಈಗಾಗಲೇ ಬಿತ್ತನೆ ಬೀಜ, ಗೊಬ್ಬರ, ಉಳುಮೆ ಗೊಬ್ಬರ ಸೇರಿದಂತೆ ರೈತರು ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದು ಈ ಸಾಲ ರೈತರಿಗೆ ಕಟ್ಟಲು ಆಗದೆ ರಿನೀವಲ್ ಮಾಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಳಲು ತೋಡಿಕೊಂಡರು.
ರೈತರ ಜಮೀನಿಗೆ ಕೆರೆ ಕಟ್ಟೆ,ಹಳ್ಳಕ್ಕೆ ನೀರು ತುಂಬಿಸಲು ನೀವು ಮೇಕೆದಾಟು ಪಾದಯಾತ್ರೆ ಮಾಡಿದ್ದೀರಿ ತಾವು ಈ ಮೇಕೆದಾಟು ಅಣೆಕಟ್ಟೆಗೆ ಹಣ ಬಿಡುಗಡೆ ಮಾಡಿ ಕೆಲಸ ಪ್ರಾರಂಭಿಸಿ ಈ ಭಾಗದ ರೈತರ ಹಿತ ಕಾಯಬೇಕೆಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಲ್ಲಿ ರವಿ ಗಂಡತೋರು
ಮನವಿ ಮಾಡಿದರು.
ತಾಲೋಕು ಅಧ್ಯಕ್ಷ ನಾಗಲಾಗೆರೆ ಶಿವಕುಮಾರ್ ಮಾತನಾಡಿ, ರೈತರು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ ರೈತರು ಪ್ರತಿ ಹಳ್ಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದು ಪ್ರತಿ ಲೆಟರ್ ಗೆ 36+4=40 ರೂಪಾಯಿಯನ್ನು ನೀಡಲಾಗುತ್ತಿದೆ. ಹುಲ್ಲು, ನೀರು, ಮೇವು, ಹಿಂಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು ಹೈನೋದ್ಯಮ ರೈತರಿಗೆ ನೀಡುತ್ತಿರುವ ಹಣ ಸಾಕಾಗುವುದಿಲ್ಲ ಕೇರಳ ಆಂಧ್ರ ಪ್ರದೇಶ ತಮಿಳುನಾಡು ಮಹಾರಾಷ್ಟ್ರ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ಸೇರಿ 60 ರೂ ನಿಗದಿ ಪಡಿಸಿವೆ ಕರ್ನಾಟಕ ಸರ್ಕಾರ ಮತ್ತು ಕೆ.ಎಂ.ಎಫ್. ಒಕ್ಕೂಟಗಳು ಸೇರಿದಂತೆ ರೈತರ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಪ್ರಾಂತ ಮಹಿಳಾ ಪ್ರಮುಖರಾದ ಪುಟ್ಟಮ್ಮ ಶ್ರೀಕಾಂಟೆಗೌಡ ಮಾತನಾಡಿ, ಕಬ್ಬುಬೆಳೆಗಾರರಿಗೆ ದಕ್ಷಿಣದ ಕಾರ್ಖಾನೆಗಳು ಅನ್ಯಾಯ ಮಾಡುತ್ತಿದ್ದು ಸರ್ಕಾರ ಮಧ್ಯ ಪ್ರವೇಶ ಮಾಡಿ ಈ ಭಾಗದ ರೈತರಿಗೆ ನ್ಯಾಯ ಕೊಡಿಸಬೇಕು ಕೋರಿದರು.
ಅಂಚೆ ಚಳವಳಿಯಲ್ಲಿ ಮೈಸೂರು ಉಪಾಧ್ಯಕ್ಷರಾದ ಆನಂದ್ ಸಿಂಗ್, ಪುಷ್ಪವತಿ, ಸಿದ್ದರಾಜು, ಮುನೇಶ್ವರ ನಗರ ಮುಖಂಡರಾದ ಜಗದೀಶ್, ಸುಪ್ರೀತ್, ಮಂಜುನಾಥ್.ಸಿ.,ಹಿರಿಯ ಕಾರ್ಯಕರ್ತ
ಮಾ. ಸ. ಪ್ರವೀಣ್ ಮತ್ತಿತರರು ಪಾಲ್ಗೊಂಡಿದ್ದರು.
