ಮೈಸೂರು: ಮೈಸೂರು ನಟರಾಜ ಪ್ರತಿಷ್ಠನಾ ಸಂಸ್ಥಾಪಕ ಹೊಸಮಠದ ಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮೀಜಿ ಅವರು ಲಿಂಗೈಕೈರಾಗಿರುವುದು ಧಾರ್ಮಿಕ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸೋಮಹಳ್ಳಿ ಮಠದ ನಿಯೋಜಿತ ಪೂಜ್ಯರಾದ ಬಸವಯೋಗಿ ಪ್ರಭುಸ್ವಾಮೀಜಿ ಹೇಳಿದ್ದಾರೆ.
ಬಸವ ಬಳಗ ಒಕ್ಕೂಟದ ಮೂಲಕ ಬಸವ ಜಯಂತಿಯನ್ನು ಮೈಸೂರಿನಲ್ಲಿ ಅದ್ದೂರಿಯಾಗಿ ಮಾಡಿದ ಕೀರ್ತಿ ಚಿದಾನಂದ ಸ್ವಾಮೀಜಿಯವರಿಗೆ ಸಲ್ಲುತ್ತದೆ ಆಡಂಬರದ ಪೂಜೆಯಿಂದ ಹೊರಗಿದ್ದು ಸರಳತೆಯನ್ನು ಅಳವಡಿಸಿಕೊಂಡಿದ್ದರು.
ಬಸವಾದಿ ಶರಣರ ಚಿಂತನೆ ಮತ್ತು ಸಮಾವೇಶಗಳಿಗೆ ತಮ್ಮ ಮಠದಲ್ಲಿ ಅವಕಾಶ ಕೊಟ್ಟು ಪ್ರೇರಣಾ ಶಕ್ತಿಯಾದ ಚಿದಾನಂದ ಮಹಾಸ್ವಾಮೀಜಿಯವರಿಗೆ ಅಂತಿಮ ಶರಣಾಂಜಲಿಗಳು ಎಂದು ಬಸವಯೋಗಿ ಪ್ರಭುಸ್ವಾಮೀಜಿ ಹೇಳಿದ್ದಾರೆ.
.
