ಮೈಸೂರು: ಪುಟ್ ಪಾತ್ ನಿಂದ ತೆರವಾದ ಪದಾರ್ಥಗಳನ್ನ ಸಾರ್ವಜನಿಕ ಶೌಚಾಲಯದಲ್ಲಿ ಪೇರಿಸಿಟ್ಟು ಜನರಿಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟವರು ಕ್ಯಾರೇ ಅನ್ನುತ್ತಿಲ್ಲ.
ಇದು ಎಲ್ಲಿ ಅಂತೀರಾ,ಮೈಸೂರಿನ ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿ ಇದು ಕಣ್ಣಿಗೆ ರಾಚುವಂತೆಯೇ ಇದೆ.ಆದರೆ ಸಂಬಂಧಪಟ್ಟವರಿಗೆ ಮಾತ್ರ ಈ ದೃಶ್ಯ ಕಂಡುಬಂದಿಲ್ಲ,ಅದೇ ಅಚ್ಚರಿ.
ಸಾರ್ವಜನಿಕ ಶೌಚಾಲಯದ ಪ್ರವೇಶ ಧ್ವಾರದಲ್ಲೇ ರಾಶಿ ರಾಶಿ ಪದಾರ್ಥಗಳನ್ನ ಇಡಲಾಗಿದೆ.ಶೌಚಾಲಯ ಬಳಕೆಗೆ ಬಾರದಂತೆ ಮಾಡಲಾಗಿದೆ.
ಮೈಸೂರು ಮಹಾನಗರಪಾಲಿಕೆ ವಲಯ ಕಚೇರಿ 5 ರಿಂದ ಕೆ.ಆರ್.ಎಸ್.ಮುಖ್ಯ ರಸ್ತೆಯಲ್ಲಿ ಫುಟ್ ಪಾತ್ ತೆರುವು ಕಾರ್ಯಾಚರಣೆ ನಡೆಸಿ,30 ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿ ತೆರುವುಗೊಳಿಸಲಾಗಿತ್ತು.
ತೆರವಾದ ಪದಾರ್ಥಗಳನ್ನ ಸಾಗಿಸದ ಅಂಗಡಿ ಮಾಲೀಕರೊಬ್ಬರು ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂದೆ ಸಂಗ್ರಹಿಸಿ ಇಟ್ಟಿದ್ದಾರೆ.
ಇದರಿಂದಾಗಿ ಶೌಚಾಲಯ ಬಂದ್ ಆಗಿದೆ.ಸಾರ್ವಜನಿಕರಿಗೆ ಪ್ರವೇಶಿಸಲು ಸಾಧ್ಯವಾಗದಂತೆ ಪದಾರ್ಥಗಳನ್ನ ಇಟ್ಟಿದ್ದಾರೆ
ಈ ಶೌಚಾಲಯ ನಿರ್ವಹಣೆ ವಾಣಿ ವಿಲಾಸ ನೀರು ಸರಬರಾಜು ಕಚೇರಿಯ ಜವಾಬ್ದಾರಿ ಆಗಿದೆ.ಮುಖ್ಯ ರಸ್ತೆಯಲ್ಲೇ ಇಂತಹ ದೃಶ್ಯ ಕಂಡು ಬಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಸಾರ್ವಜನಿಕ ಶೌಚಾಲಯವೇ ಬಂದ್ ಆಗಿದೆ.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಇತ್ತ ಗಮನ ಹರಿಸಿ ಪದಾರ್ಥಗಳನ್ನು ತೆರವುಗೊಳಿಸಲಿ ಎಂದು ಜನ ಆಗ್ರಹಿಸಿದ್ದಾರೆ.
