ಯಳಂದೂರು: ಯಳಂದೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಅಯ್ಯನ ಸರಗೂರು ಮಠ ಹಾಗೂ ಶ್ರೀ ಮಲೆ ಮಹದೇಶ್ವರ ಬೆಟ್ಟ ಎಣ್ಣೆ ಮಜ್ಜನ ಶ್ರೀ ಗಳಾದ ಚಿನ್ನಸ್ವಾಮೀಜಿಗಳ ಮೊಮ್ಮಗ ಸಂಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣುಹಂಪಲು ವಿತರಿಸಲಾಯಿತು.
ಉಪ್ಪಾರ ಜನಾಂಗದ ಮುಖಂಡರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಜಯ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.
ಈ ವೇಳೆ ಉಪ್ಪಾರ ಮುಖಂಡರಾದ ಬಾಗಳಿ ರೇವಣ್ಣ ನೇತೃತ್ವ ವಹಿಸಿ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಉಪ್ಪಾರ ಮುಖಂಡರುಗಳಾದ ವೈಕೆ ಮೋಳೆ ದೊರೆಸ್ವಾಮಿ, ಕೆಂಪರಾಜು, ದೊಡ್ಡರಾಜು, ಶಿವರಾಜು,ಉಪ್ಪಾರ ಸಂಘದ ಅಧ್ಯಕ್ಷ ಪ್ರದೀಪ್, ನಂಜರಾಜು, ಹರೀಶ್, ಮಂಗಲ ಕುಮಾರ, ಸೊಮ್ಮಣ್ಣ, ರಂಗಸ್ವಾಮಿ, ಆಡಳಿತ ವ್ಯದ್ಯದಿಕಾರಿ ಡಾ. ಶ್ರೀಧರ್ ಮತ್ತಿತರರು ಹಾಜರಿದ್ದರು.
