ಬೆಳಗಾವಿ: ಕಾರು ಹಾಗೂ ಟ್ರಕ್ ಡಿಕ್ಕಿಯಾಗಿ
ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ
ಜಿಲ್ಲೆಯ ನಿಪ್ಪಾನಿ ಬಳಿ
ರಾಷ್ಟ್ರೀಯ ಹೆದ್ದಾರಿ–48ರ ಸ್ಥವನಿಧಿ ಘಾಟ್
ಬಳಿ ನಡೆದಿದೆ.
ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಸೋಯಲ್ ಮುನೇರ (36) ಹಾಗೂ ಇಂಚಲಕರಂಜಿ ಗ್ರಾಮದ ವಿನಯ ಪಾಟೀಲ ಮೃತಪಟ್ಟ ದುರ್ದೈವಿಗಳು.
ಬ್ರೇಕ್ ಫೇಲ್ ಆದ ಕಾರಣ ಟ್ರಕ್ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು.
ನಿಪ್ಪಾಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
