ಮೈಸೂರು: ಸಂಗೀತ ಶಿಕ್ಷಕ ಪುರುಷೋತ್ತಮ್ ಕಿರಗಸೂರು ಅವರು ಉಚಿತವಾಗಿ ಸಂಗೀತ ಅಭ್ಯಾಸ ಮಾಡಿಸುತ್ತಿದ್ದು ಅದರ ಪೋಸ್ಟರ್ ಅನ್ನು ಶಾಸಕ ಟಿ.ವಿ.ಶ್ರೀವತ್ಸ ಬಿಡುಗಡೆ ಮಾಡಿದರು.
ಸ ಪ ಸ ಸಂಗೀತ ವಿದ್ಯಾಲಯ ವತಿಯಿಂದ ಕುವೆಂಪು ನಗರದಲ್ಲಿರುವ ಸಂಗೀತ ವಿದ್ಯಾಲಯ ಕೇಂದ್ರದಲ್ಲಿ ಸ ಪ ಸ ಸಂಗೀತ ಶಾಲೆಯ ಎಲ್ಲಾ ಶಾಸ್ತ್ರೀಯ ಸಂಗೀತ ಮತ್ತು ಹಾಡುವ ವಿದ್ಯಾರ್ಥಿಗಳಿಗೆ ಬ್ರಾಹ್ಮಿ ಮುಹೂರ್ತ ಬೆಳಗ್ಗೆ 4:30 ರಿಂದ 5:30ರ ವರೆಗೆ ಗುರುಕುಲ ಶೈಲಿಯಲ್ಲಿ ಸಂಗೀತ ಅಭ್ಯಾಸವನ್ನು ಜುಲೈ 1 ರಿಂದ 30 ರವರೆಗೆ ಪುರುಷೋತ್ತಮ್ ಕಿರಗಸೂರು ಅವರು ಉಚಿತವಾಗಿ ನೀಡುತ್ತಿದ್ದಾರೆ.
ಅದರ ಪೋಸ್ಟರ್ ಅನ್ನು ಅಗ್ರಹಾರದ ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಿದ ಟಿ ಎಸ್ ಶ್ರೀವತ್ಸ ಶುಭ ಕೋರಿದರು.
ಈ ವೇಳೆ ಮಾತನಾಡಿದ ಸಂಗೀತ ಶಿಕ್ಷಕ ಪುರುಷೋತ್ತಮ್ ಕಿರಗಸೂರು,ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕೆ ಸುಮಾರು 1 ಗಂಟೆ 36 ನಿಮಿಷಗಳ ಮೊದಲು ಇರುವ ಪವಿತ್ರ ಸಮಯ ಎಂದು ತಿಳಿಸಿದರು.
ಭಾರತೀಯ ಸಂಪ್ರದಾಯದಲ್ಲಿ ಈ ಸಮಯವನ್ನು ಜ್ಞಾನ, ಧ್ಯಾನ, ಯೋಗ ಮತ್ತು ಸಂಗೀತಾಭ್ಯಾಸಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.
ಬ್ರಾಹ್ಮೀ ಮುಹೂರ್ತದಲ್ಲಿ ಸಂಗೀತಾಭ್ಯಾಸದ ಮಹತ್ವ ಎಂದರೆ-
ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ,ಈ ಸಮಯದಲ್ಲಿ ಮನಸ್ಸು ಶಾಂತವಾಗಿದ್ದು, ಕಲಿಕೆಯ ಸಾಮರ್ಥ್ಯ ಹೆಚ್ಚಿರುತ್ತದೆ.
ಬೆಳಗಿನ ತಾಜಾ ವಾತಾವರಣದಿಂದ ಕಂಠವು ಮೃದುವಾಗಿ, ಸ್ವರಗಳು ಸ್ಪಷ್ಟವಾಗಿ ಮೂಡುತ್ತವೆ.
ಶ್ರುತಿ, ಲಯ ಮತ್ತು ಸ್ವರಗಳ ಮೇಲಿನ ಹಿಡಿತ ಉತ್ತಮವಾಗುತ್ತದೆ.
ಪ್ರಾಣಾಯಾಮದೊಂದಿಗೆ ಅಭ್ಯಾಸ ಮಾಡಿದರೆ ಉಸಿರಾಟದ ಸಾಮರ್ಥ್ಯ ಹೆಚ್ಚಾಗಿ ಗಾಯನ ಸುಧಾರಿಸುತ್ತದೆ.
ಸಂಗೀತಾಭ್ಯಾಸದಿಂದ ಮನಸ್ಸಿಗೆ ಶಾಂತಿ ದೊರೆತು ಒತ್ತಡ ಕಡಿಮೆಯಾಗುತ್ತದೆ.
ವಿಶೇಷವಾಗಿ ಬೆಳಗಿನ ರಾಗಗಳಾದ ಭೈರವ, ಮಾಯಾಮಾಳವಗೌಳ ಮುಂತಾದ ರಾಗಗಳ ಅಭ್ಯಾಸಕ್ಕೆ ಇದು ಅತ್ಯುತ್ತಮ ಸಮಯ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಲಾವಣ್ಯ, ದರ್ಶನ್, ಪ್ರಿಯಾ, ರೂಪ,ನಾಗಶ್ರೀ, ಸುಚೇಂದ್ರ,ಮತ್ತು ವಿದ್ಯಾರ್ಥಿಗಳಾದ ಜ್ಯೋತಿರ್ಮಯಿ, ಶ್ರಾವ್ಯ, ಚೇತನ್ ಮತ್ತು ಪೋಷಕರಾದ ರಶ್ಮಿ, ಲಕ್ಷ್ಮಿ, ಶ್ರೀನಿವಾಸ್ ಹಾಜರಿದ್ದರು.
