ಯಳಂದೂರು,ಜೂ.1: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಎರಡನೇ ಸರಕಾರಿ ಹಿರಿಯ ಪ್ರಾಥಮಿಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಎಸ್ ಡಿ ಎಂ ಸಿ ಅಧ್ಯಕ್ಷ ಶಿವಸ್ವಾಮಿ, ಮುಖ್ಯ ಶಿಕ್ಷಕ ನಂಜುಂಡಸ್ವಾಮಿ ಹಾಗೂ ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಪುಸ್ತಕ, ಸಮವಸ್ತ್ರ ವಿತರಿಸಿದರು.
ಬೇಸಿಗೆ ರಜೆ ಕಳೆದ ವಿದ್ಯಾರ್ಥಿಗಳು ಶಾಲೆಗೆ ಖುಷಿಯಿಂದ ಆಗಮಿಸಿದರು.
ಶಾಲೆ ಆವರಣದಲ್ಲಿ ಸಂಭ್ರಮ ಮನೆಮಾಡಿತ್ತು.
ನಂತರ ನಂತರ ಶಾಲಾ ಅವರಣದಲ್ಲಿ ಶಾಲ ದಾಖಲಾತಿ ಅಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಡೋಲು ವಾದ್ಯ ನಾದದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಸ್ವಾಮಿ, ಮುಖ್ಯ ಶಿಕ್ಷಕ ನಂಜುಂಡಸ್ವಾಮಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶಿಲ್ಪಾ ಮಹದೇವಸ್ವಾಮಿ ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಮಧು, ಸಿದ್ದಪ್ಪಾಜಿ,ಶಿಕ್ಷಕರಾದ ವರದರಾಜು , ಎಸ್ ಪುಟ್ಟರಾಜಮ್ಮ, ಕೆ ಮಂಜುಳ, ಲಲಿತಾಂಬ , ಎನ್ ಮಂಜುಳ ಪುಷ್ಪಲತಾ ಹಾಗೂ ಅಡಿಗೆ ಸಿಬ್ಬಂದಿಗಳಾದ ಗುಣವತಿ, ಮಹಾದೇವಮ್ಮ, ಸಹನಾ ಹಾಗೂ ಪೋಷಕರು ಹಾಜರಿದ್ದರು.
