ಮೈಸೂರು: ಐಪಿಎಲ್ 2026 ಫೈನಲ್ ನಲ್ಲಿ ಸತತ ಎರಡನೇ ಬಾರಿಗೆ ಆರ್ ಸಿ ಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ದೇವರಾಜ ಅರಸು ರಸ್ತೆಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ಐಪಿಎಲ್ ಕಪ್ನ ಪ್ರತಿಕೃತಿ ಹಿಡಿದು ಶಾಸಕ ಹರೀಶ್ ಗೌಡ ಶುಭಾಶಯ ಕೋರಿದರು.
ನಗರದ ದೇವರಾಜ ಅರಸು ರಸ್ತೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಆರ್ಸಿಬಿ ತಂಡದ ಆಟಗಾರರ ಬೃಹತ್ ಕಟೌಟ್ ಅಳವಡಿಸಿ, ಪಟಾಕಿ ಸಿಡಿಸಿ ,ಕೇಕ್ ಕತ್ತರಿಸಿ,ಆರ್ಸಿಬಿ ಜರ್ಸಿ ಹಾಗೂ ಆರ್ಸಿಬಿ ದ್ವಜ ಹಿಡಿದು
ಐಪಿಎಲ್ ಕಪ್ನ ಪ್ರತಿಕೃತಿಯೊಂದಿಗೆ ಸಂಭ್ರಮಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಕೆ. ಹರೀಶ್ ಗೌಡ ಮಾತನಾಡಿ 18 ರ್ಷಗಳ ಬಳಿಕ ಸತತವಾಗಿ ಎರಡನೇ ಬಾರಿಗೆ ಐಪಿಎಲ್ ಕಪ್ ಗೆದ್ದದ್ದು ಕ್ರೀಡಾಲೋಕದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಅಸ್ಮಿತೆ ಹೆಚ್ಚಿಸಿದೆ ಎಂದು ಹೇಳಿದರು.
ಅಭಿಮಾನಿಗಳು ವಿಶ್ವದೆಲ್ಲಡೆ ಸಂಭ್ರಮಿಸಿದ್ದಾರೆ, ನಾಯಕ ರಜತ್ ಪಾಟೀದಾರ್ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಮತ್ತು ಬೌಲಿಂಗ್ ನಲ್ಲಿ ಭುವನೇಶ್ವರ್, ಸಲಾಮ್, ಹೇಜಲ್ ವುಡ್, ಕೃನಾಲ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಈ ಭಾರಿಯ ಟಾಟಾ ಐಪಿಎಲ್ ಸಣ್ಣಪುಟ್ಟ ಮಕ್ಕಳಿಂದ ಹಿರಿಯ ನಾಗರೀಕರ ವರೆಗೂ ಆರ್.ಸಿ.ಬಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನ ಹುಟ್ಟುಹಾಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳಾದ
ನವೀನ್, ಗುರುರಾಜ್ ,ಪ್ರಮೋದ್, ರವಿಚಂದ್ರ, ಎಸ್ ಎನ್ ರಾಜೇಶ್,ಸಂತೋಷ್ ,ಮಂಜುನಾಥ್,ಹರೀಶ್ ಗೌಡ, ಕಿರಣ್ ,ಅಭಿ ,ಹರ್ಷ, ವರುಣ್ ,
ಶ್ರೀನಿವಾಸ್ ಶೆಟ್ಟಿ ,ಮಂಜು, ಶಿವು
ಮುಂತಾದವರು ಹಾಜರಿದ್ದರು.
