ಮೈಸೂರು,ಏ.1: ಇದೀಗ ಮೈಸೂರು ಅರಮನೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಅರಮನೆಯ ಕೋಟೆ ದುರಸ್ತಿಯನ್ನು ಕಾರ್ಯ ಪ್ರಾರಂಭಿಸಿದ್ದು,ಭರದಿಂದ ಸಾಗಿದೆ.
ಸುಮಾರು 72 ಎಕರೆ ವಿಸ್ತೀರ್ಣದ ಮೈಸೂರು ಅರಮನೆ ಸುತ್ತ ನಿರ್ಮಾಣವಾಗಿರುವ ಕೋಟೆ ನೂರಾರು ವರ್ಷಗಳ ಇತಿಹಾಸದ ಪಾರಂಪರಿಕ ಕೋಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಅರಮನೆ ಕೋಟೆಯ ಪೂರ್ವಭಾಗದಲ್ಲಿ ಕಲ್ಲುಗಳು ಕುಸಿದಿತ್ತು.ಪಾರಂಪರೆಗೆ ಧಕ್ಕೆಯಾಗದಂತೆ ಹಳೆಯ ಕಲ್ಲುಗಳನ್ನೇ ಬಳಸಿ ಕೋಟೆ ದುರಸ್ತಿ ಕಾರ್ಯ ಕೈಗೊಳ್ಲಲಾಗಿದೆ, ಭಾರೀ ಗಾತ್ರದ ಕಲ್ಲು ಎತ್ತಲು ಕ್ರೇನ್ ಬಳಕೆ ಮಾಡಿಕೊಳ್ಳಲಾಗಿದೆ.
ಅರಮನೆಯ ಮುಖ್ಯ ದ್ವಾರದ ಜಯಮಾರ್ತಾಂಡ ಗೇಟ್ ಬಲಭಾಗದಲ್ಲಿ ಸುಮಾರು ಎರಡು ವಾರಗಳಿಂದಲೂ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹಳೆಯ ಕಲ್ಲುಗಳು, ಸಿಮೆಂಟ್, ಮರಳು ಬಳಸಿ ಐತಿಹಾಸಿಕ ಕೋಟೆ ಮಾದರಿಯಲ್ಲೇ ನಿರ್ಮಾಣ ಮಾಡಲಾಗುತ್ತಿದೆ.
