ಮೈಸೂರು: ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ಶಾಲಾ ಕೊಠಡಿ ಹಾಗೂ ಶಾಲೆಯ ದ್ವಾರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಹಾಗೂ ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಾದ ಶ್ರೀನಿವಾಸ್, ಮೈಸೂರು ಜಿಲ್ಲೆಯ ಉಪನಿರ್ದೇಶಕರಾದ ಉದಯ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವು,ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನಂಜುಂಡೇಗೌಡ, ಚೆನ್ನಪ್ಪ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ರೇವಣ್ಣ, ಆಕಾಶ್ ಪ್ಯಾಕೇಜಿಂಗ್ ಮಾಲಿಕ ಗುರುರಾಜ್, ಬಿ ಆರ್ ಸಿ ಗೀತಾ, ಇಸಿಒ ಸುಬ್ಬಾಶೆಟ್ಟಿ, ಸಿ ಆರ್ ಪಿ ಧನಂಜಯ್, ಮುಖ್ಯ ಶಿಕ್ಷಕ ನಾಗರಾಜು,ನಿವೃತ್ತ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ, ಸತೀಶ್, ಮಾಜಿ ಪಂಚಾಯಿತಿ ಸದಸ್ಯರಾದ ಜಿಮ್ ರಾಮು, ಮಾದೇಶ್, ರಕ್ತದಾನಿ ಮಂಜು, ಸಮೃದ್ಧಿ ವಾರ್ತಾ ಪತ್ರಿಕೆಯ ಸಹನಾ ಸೇರಿದಂತೆ ಹಲವಾರು ಮಂದಿ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
