ಮೈಸೂರು: ಮೈಸೂರಿನ ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದಾ ನೆಲೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದವರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಕ್ರೀಡಾಸಕ್ತಿ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಡ್ರೈ ಫ್ರೂಟ್ಸ್,ಹಣ್ಣು, ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಕ ಭಕ್ತವತ್ಸಲ ಅವರು, ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುವುದರ ಜೊತೆಗೆ ತಮ್ಮ ನೆಚ್ಚಿನ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮಾನಸಿಕವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಭಾಗವಹಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಭಾಗವಹಿಸಿದಾಗ ಸಿಗುವ ಸಣ್ಣ ಪುಟ್ಟ ಸಂತೋಷವೇ ಬದುಕಿಗೆ ಬಹುದೊಡ್ಡ ಸ್ಪೂರ್ತಿಯಾಗಿರುತ್ತದೆ ಎಂದು ಹೇಳಿದರು.
ತಂದೆ, ತಾಯಿ, ಶಿಕ್ಷಕರನ್ನು ಗೌರವಿಸಬೇಕು ತಾವು ಆಶ್ರಯ ಪಡೆದಿರುವ ಶಾರದ ನೆಲೆಯ ಎಲ್ಲರಿಗೂ ಗೌರವಿಸುವುದರ ಜೊತೆಗೆ ಚೆನ್ನಾಗಿ ಓದಿ ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ನೋಡಿಕೊಳ್ಳಬೇಕು, ತಮಗೆ ಆಶ್ರಯ ನೀಡಿದ ವಿದ್ಯಾರ್ಥಿ ನಿಲಯಕ್ಕೂ ಸಹಾಯ ಮಾಡಬೇಕೆಂದು ನೀತಿಪಾಠ ಹೇಳಿದರು.
ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ,ತಂದೆ ತಾಯಿಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಹಳಷ್ಟು ಶ್ರಮಿಸಿರುತ್ತಾರೆ,ಅದನ್ನು ಅರಿಯಬೇಕು ಎಂದು ತಿಳಿಸಿದರು.
ಹುಟ್ಟುವಾಗ ಉಸಿರು ಇರುತ್ತದೆ ಹೆಸರಿರುವುದಿಲ್ಲ ಉಸಿರು ನಿಂತ ಮೇಲೆ ನಿಮ್ಮ ಹೆಸರು ಈ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯುವ ಹಾಗೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಆಶ್ರಯ ನೀಡಿರುವ ಶಾರದಾ ನೆಲೆ ಹಾಗೂ ತಮ್ಮ ಪೋಷಕರಿಗೆ ಒಳ್ಳೆಯ ಹೆಸರನ್ನು ತರುವಂತವರಾಗಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಶಾರದಾ ನೆಲೆಯ ರೇವತಿ, ಕೆ.ಶೋಭಾ, ಸಿಂಚನಗೌಡ, ಹಿರಿಯ ಕ್ರೀಡಾಪಟು ಮಹದೇವ್ ,ರಾಜೇಶ್ ಕುಮಾರ್,ಮಹೇಶ, ದತ್ತ, ವೈಭವ್ ಬಿ ಶೆಟ್ಟಿ ಮತ್ತಿತರರು ಹಾಜರಿದ್ದರು.
