ಯಾದಗಿರಿ: ಮಹಾಶಿವರಾತ್ರಿ ಪ್ರಯುಕ್ತ ನೆರೆ ರಾಜ್ಯ ಆಂದ್ರಪ್ರದೇಶದ ಶ್ರೀಶೈಲಂಗೆ ತೆರಳುತ್ತಿದ್ದ ಭಕ್ತರು ವಾಹನ ಅಪಘಾತವಾಗಿ ಶಿವನ ಪಾದ ಸೇರಿದ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ನಿವಾಸಿಗಳಾದ ರಾಮನಗೌಡ ಗೋಗಿ(52)ಅವರ ಪತ್ನಿ ಮೇಘಾ(48) ಮತ್ತು ಅತ್ತೆ ಮಹಾದೇವಮ್ಮ ಕಲಕೇರಿ(70) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಲ್ಲಯ್ಯನ ದರ್ಶನ ಪಡೆಯಲು ಶುಕ್ರವಾರ ರಾತ್ರಿ ಯಾದಗಿರಿಯಿಂದ ಶ್ರೀಶೈಲಂಗೆ ಪ್ರಯಾಣ ಬೆಳೆಸಿದ ಭಕ್ತರ ಕ್ರೋಸರ್ ವಾಹನ ಆಂದ್ರಪ್ರದೇಶದ ಕಲಕುರ್ತಿ ಬಳಿ ಶನಿವಾರ ಮುಂಜಾನೆ ಅಪಘಾತಕ್ಕೀಡಾಗಿದೆ.
ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಮುಂಭಾಗ ಪೂರ್ತಿ ಜಜ್ಜಿ ಹೋಗಿದೆ.
ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ,ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು, ಕಲಗುರ್ತಿ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಗುತ್ತಿದೆ.
ಯಾದಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
