ಬ್ಯಾಂಕಾಕ್: ದಕ್ಷಿಣ ಥೈಲ್ಯಾಂಡ್ನ ಶಾಲೆಯಲ್ಲಿ ಬಂದೂಕುಧಾರಿ ಯುವಕ ಮೆಷಿನ್ ಗನ್ನೊಂದಿಗೆ ನುಗ್ಗಿ ಶಾಲಾ ಪ್ರಾಂಶುಪಾಲರನ್ನು ಗಾಯಗೊಳಿಸಿ, ಶಿಕ್ಷಕರು ಮತ್ತು ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡ ಘಟನೆ ನಡೆದಿದೆ.
ಮಲೇಷ್ಯಾ ಗಡಿಯ ಸಮೀಪವಿರುವ ಹ್ಯಾಟ್ ಯೈ ಜಿಲ್ಲೆಯ ಪಟೋಂಗ್ ಪ್ರಥಾನ್ ಕಿರಿವತ್ ಶಾಲೆಯಲ್ಲಿ ತರಗತಿ ಮುಗಿದ ಸ್ವಲ್ಪ ಹೊತ್ತಿಗೆ ಈ ದಾಳಿ ನಡೆದಿದೆ.
ಮೆಷಿನ್ ಗನ್ ಹಿಡಿದಿದ್ದ ವ್ಯಕ್ತಿಯೊಬ್ಬ ಮೈದಾನದಲ್ಲಿ ನಡೆದು ಬರುವಾಗ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿದ ವಿದ್ಯಾರ್ಥಿಗಳು ಆತಂಕದಿಂದ ಹೊರಗೆ ಓಡಿದ್ದಾರೆ ಕೆಲವರು ಆತನ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆತ ಶಾಲೆಯ ಮುಖ್ಯೋಪಾಧ್ಯಾಯರಿಗೆ ಗುಂಡು ಹಾರಿಸಿ,ಭದ್ರತಾ ಸಿಬ್ಬಂದಿಗೂ ಶೂಟ್ ಮಾಡಿದ್ದ. ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒತ್ತೆಯಾಳಾಗಿಟ್ಟು ಕೊಂಡಿದ್ದಾನೆ.
ಕೆಲ ಸಮಯದ ನಂತರ ಆತನನ್ನು ಬಂಧಿಸಿದ ಪೊಲೀಸರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.ಒಂದಿಬ್ಬರಿಗೆ ಗಾಯಗಳಾಗಿವೆ.
