ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ರೇಡಿಯೋಲಜಿ ಇಮೇಜಿಂಗ್ ಅಧಿಕಾರಿಗಳ ಸಂಘದ ವತಿಯಿಂದ ವಿ ವಿ ಮೊಹಲ್ಲಾ ನಳಪಾಕ ಹೋಟೆಲ್ ನಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಹಳೇ ಬೇರು ಹೊಸ ಚಿಗುರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾoಟಜನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಹಿರಿಯವೃತ್ತಿ ಬಾಂಧವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಅಶೋಕ್ ಸೋಮಪ್ಪ ವಾಲ್ಮೀಕಿ, ಜಿಲ್ಲಾಧ್ಯಕ್ಷ ಎಂ ಎನ್ ಚಂದ್ರಕಲಾ,ಗೌರವಾಧ್ಯಕ್ಷ ರಾಮು ಹೂಳ್ಳೆಪ್ಪ,ಕಾರ್ಯದರ್ಶಿ ಕ್ರಿಸಸ್,
ಕೋಶಾಧ್ಯಕ್ಷ ಪ್ರಮೋದ್ ಹಿರೇಮಠ,ಕಾರ್ಯಧ್ಯಕ್ಷ ಗಜೇಂದ್ರ ಗಂಗಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಆರ್ ಎನ್, ರಾಜ ಉಪಾಧ್ಯಕ್ಷರಾದ ಜಿ.ಎಂ ನಾಗರಾಜು,ವಿಭಾಗೀಯ ಉಪಾಧ್ಯಕ್ಷ ಬಿ.ಟಿ ಪುಟ್ಟರಾಜು, ಮೈಸೂರು ಜಿಲ್ಲೆಯ ಕಾರ್ಯಾಧ್ಯಕ್ಷ ಸಂದೀಪ್ ಕದಂ, ಖಜಾಂಚಿ ವೀಣಾ, ಕಾರ್ಯದರ್ಶಿ ಸಂತೋಷ್, ವೈಜ್ಞಾನಿಕ ಕಾರ್ಯದರ್ಶಿ ಪದ್ಮಶ್ರೀ ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಎಲ್ಲಾ ವಿಕಿರಣ ಚಿತ್ರಣ ಅಧಿಕಾರಿಗಳು ಹಾಜರಿದ್ದರು.
