ಮೈಸೂರು: ಜ 22 ರಂದು ಅಯೋಧ್ಯ ಪ್ರಭು ಶ್ರೀ ರಾಮದೇವರ ಪ್ರತಿಷ್ಠಾಪನೆ 2ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು,ಅದರ ಪೋಸ್ಟರ್ ಅನ್ನು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಬಿಡುಗಡೆ ಗೊಳಿಸಿದರು.
ಅಯೋಧ್ಯ ಪ್ರಭು ಶ್ರೀ ರಾಮದೇವರ ಪ್ರತಿಷ್ಠೆಯಾಗಿ 2ನೇವರ್ಷದ ವಾರ್ಷಿಕೋತ್ಸವ ಹಾಗೂ ಮೈಸೂರಿನಲ್ಲಿ ಸಂಭ್ರಮದಿಂದ ಆಚರಿಸುತ್ತಿರುವ 3ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮವು ಜನವರಿ 22ರಂದು ಸಂಜೆ 6.30ಕ್ಕೆ ಮೈಸೂರಿನ ಮುಖ್ಯ ದ್ವಾರದ ಅಶೋಕ ರಸ್ತೆಯ ವೀರ ಗಣಪತಿ ದೇವಸ್ಥಾನ ವೀರನಗಿರಿಯಲ್ಲಿ ನಡೆಯಲಿದ್ದು,
ಅದರ ಪ್ರಚಾರ ಸಾಮಗ್ರಿಯನ್ನು
ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ಅವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು ಇದು ಅತ್ಯಂತ ಸಂತೋಷದ ವಿಷಯ, ಸಮಸ್ತ ಭಾರತೀಯರ ಆಕಾಂಕ್ಷೆಯಾಗಿದ್ದ ಅಯೋಧ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದು,ರಾಮ ಮಂದಿರ ನಿರ್ಮಾಣವು ಭಾರತೀಯ ಪರಂಪರೆಯನ್ನು ಪುನರ್ಜೀವನಗೊಳಿಸುವ ಕೆಲಸವಾಗಿತ್ತು, ಅಯೋಧ್ಯ ಬಾಲ ರಾಮನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದರು.
ವಿದ್ವಾನ್ ಪ್ರಹ್ಲಾದ್ ರಾವ್ ಅವರು ಮಾತನಾಡಿ,ವಿಶ್ವದೆಲ್ಲೆಡೆ ರಾಮಭಕ್ತರು ಆಚರಿಸುವಂತಹ ಸಂತೋಷದ ದಿನ ಸಂಭ್ರಮಿಸುವಂತಹ ದಿನ ಇದಾಗಿದ್ದು, ರಾಮದೇವರ ಪ್ರತಿಷ್ಠಾಪನೆಯಾಗಿ
ಅಯೋಧ್ಯೆಯಲ್ಲಿ 2 ವರ್ಷ ತುಂಬಿದೆ, ಮೈಸೂರಿನ ಜನತೆ ಪ್ರತಿ ಮನೆಯಲ್ಲೂ ದೀಪ ಬೆಳಗಿಸುವಂತಹ ದಿವಸವಾಗಿದ್ದು ಅದರ ಹಿನ್ನೆಲೆಯಲ್ಲಿ ಈ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಲಕ್ಷ ದೀಪೋತ್ಸವಕ್ಕೆ ಮೈಸೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9845128450 ಸಂಪರ್ಕಿಸಬಹದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ,ಮಂಜುನಾಥ್, ಎಸ್ ಎನ್ ರಾಜೇಶ್,ಶ್ರೀನಿವಾಸ್, ನಕ್ಷತ್ರ ವಿಜಯ್, ಪುನೀತ್ ಕೂಡ್ಲೂರು,ಗಣೇಶ್, ಅಮಿತ್, ಕೃಷ್ಣ ದಾಸ್ ಪುರಾಣಿಕ್, ಶ್ಲೋಕ ಪಠಣೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಬಾಲಕ ಪೃಥು ಪಿ ಅದ್ವೈತ್ ಮತ್ತಿತರರು ಹಾಜರಿದ್ದರು.
