ಮೈಸೂರು: ಮೈಸೂರಿನಲ್ಲಿ ಕರ್ನಾಟಕದ ಅಭಿವೃದ್ಧಿ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ ದೇವರಾಜ ಅರಸು ಅವರ ಪುಣ್ಯ ಸ್ಮರಣೆ ಮಾಡಲಾಯಿತು.
ಮೈಸೂರಿನ ಹೃದಯ ಭಾಗ ಡಿ ದೇವರಾಜ ಅರಸು ರಸ್ತೆಯಲ್ಲಿರುವ ಅರಸು ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಣೆ ಮಾಡಲಾಯಿತು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಕಾಂಗ್ರೆಸ್ ಒಬಿಸಿ ಘಟಕದ ರಾಮಪ್ಪ ರಮೇಶ್, ಮುಖಂಡರಾದ ರವಿಚಂದ್ರ,ಮೋಹನ್,
ರವಿಕುಮಾರ್, ಘಂಟಯ್ಯ,ಮಂಜುನಾಥ್ ಎಸ್ ಎನ್ ರಾಜೇಶ್, ಲೋಕೇಶ್, ಉಮೇಶ್, ಯತೀಂದ್ರ, ನಿತಿನ್ ಮತ್ತಿತರರು ಭಾಗವಹಿಸಿದ್ದರು.
