ಸಿದ್ದು ಮೂಲಿಮನಿ ನಟನೆಯ ‘ಸೀಟ್ ಎಡ್ಜ್’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದು,ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಭಾರೀ ಸದ್ದು ಮಾಡ್ತಾ ಇದಾವೆ
ಚೇತನ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಘೋಸ್ಟ್ ಹಂಟಿಂಗ್ ಕಥೆಯಿದೆ.
ವ್ಲಾಗರ್ ಒಬ್ಬನ ಜೀವನದ ಏಳುಬೀಳಿನ ಜೀವನವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ರವೀಕ್ಷಾ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಗಿರೀಶ್ ಶಿವಣ್ಣ, ರಾಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್, ಪುನೀತ್ ಬಾಬು, ತೇಜು ಪೊನ್ನಪ್ಪ ಚಿತ್ರದಲ್ಲಿ ನಟಿಸಿದ್ದಾರೆ.
ಗಿರಿಧರ ಟಿ ವಸಂತಪುರ ಹಾಗೂ ಶ್ರೀಮತಿ ಸುಜಾತಾ ಗಿರಿಧರ ಸೇರಿ ‘ಸೀಟ್ ಎಡ್ಜ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು, ಶಿವಮೊಗ್ಗ, ಮೈಸೂರು ಹಾಗೂ ಕುದುರೆ ಮುಖ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ದೀಪಕ್ ಕುಮಾರ್ ಛಾಯಾಗ್ರಹಣ, ಆಕಾಶ್ ಪರ್ವ ಸಂಗೀತ ಚಿತ್ರಕ್ಕಿದೆ. ಜನವರಿ 30ರಂದು ‘ಸೀಟ್ ಎಡ್ಜ್’ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರದ ಹೊಸದೊಂದು ಹಾಡು ಬಿಡುಗಡೆ ಆಗಿತ್ತು. ‘ಲೈಫು ಯಾಕೋ ಖಾಲಿ ಖಾಲಿ’ ಅಂತ ಶುರುವಾಗುವ ಹಾಡಿನಲ್ಲಿ ಸಿದ್ದು ಜೊತೆ ರಾಘು ರಾಮನಕೊಪ್ಪ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
