ಯಳಂದೂರು: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಜತೆಗೆ ಶಾಲೆಯ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ಪಠ್ಯಪುಸ್ತಕಗಳ ವಿತರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಉಪ ವಲಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ ಅವರು ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎಂ ಕುಮಾರಸ್ವಾಮಿ ಮಾತನಾಡಿ ಮಾನವ ಪ್ರಕೃತಿಯ ಕೂಸು, ಉತ್ತಮ ಪರಿಸರವಿದ್ದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಇಂದಿನ ತಾಂತ್ರಿಕ ಯುಗದಿಂದ ಪರಿಸರದ ಮೇಲೆ ಆನೇಕ ದುಷ್ಪರಿಣಾಮಗಳು ಬೀರುತ್ತಿದೆ. ಇದಕ್ಕೆ ಜಾಗೃತಿ ಮುಖ್ಯವಾಗಿದೆ, ಪ್ರತಿಯೊಬ್ಬ ನಾಗರೀಕರು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾಡಿದ್ದರೆ ನಾಡು, ಹಸಿರಿದ್ದರೆ ಉಸಿರು, ಪರಿಸರವು ಪ್ರತಿ ಮಾನವನ ಬದುಕಿನ ಆಧಾರವಾಗಿದೆ.ಗಿಡ ಮರ,ಜಲ,ವಾಯು, ಮಣ್ಣು,ಪ್ರಾಣಿ ಪಕ್ಷಿಗಳು ಪರಿಸರದ ಅವಿಭಾಜ್ಯ ಅಂಗವಾಗಿದೆ ಪರಿಸರ ಸಮತೋಲನ ಕಾಪಾಡಿದಾಗ ಜೀವ ಜಗತ್ತು ಉಳಿಯುತ್ತದೆ ಇಲ್ಲವೆಂದರೆ ಭೂಮಿಗೆ ಆಪತ್ತು ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು.
ಒಂದು ಮರ ನೆಟ್ಟು ಉಳಿಸಿದರೆ ಒಂದು ಸಾವಿರ ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ನಾವು ಸಸಿಗಳನ್ನು ನಮ್ಮ ಸುತ್ತಲಿನ ಪ್ರದೇಶಗಳಲ್ಲಿ ನೆಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.
ನಂತರ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿರುದ್ದಿ ಅಧಿಕಾರಿ ಶಶಿಕಾಲ, ಉಪ ಪ್ರಾಂಶುಪಾಲರಾದ ಜ್ಞಾನೇಂದ್ರ ಸ್ವಾಮಿ, ವಿಷಯ ಪರಿವೀಕ್ಷಕರಾದ ಮಂಜುಳ , ಜಯಲಕ್ಷ್ಮಿ, ನಿಲಯ ಪಾಲಕ ತ್ಯಾಗರಾಜು, ಶಿಕ್ಷಕರರಾದ ಸುನೀಲ್ ಕುಮಾರ್ ರಾಜಶೇಖರ್, ಸಿದ್ದಮುತ್ತು, ಚಿನ್ನ ಮುತ್ತು, ಪ್ರದೀಪ್, ಚೇತನ್, ರಿತೇಶ್ ಮತ್ತು ಶಾಲಾ ಮಕ್ಕಳು ಹಾಜರಿದ್ದರು.
