ನಂಜನಗೂಡು: ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಲಿಂಗಣ್ಣ ಸ್ವಾಮಿ ಸಲಹೆ ನೀಡಿದರು.
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ 11ನೇ ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶ್ರದ್ಧೆ,ಏಕಾಗ್ರತೆ ಹಾಗೂ ದೈಹಿಕ ಮನೋಬಲಗಳನ್ನು ಹೆಚ್ಚು ಮಾಡುವುದಕ್ಕೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ನಿತ್ಯ ಯೋಗ,ಪ್ರಾಣಾಯಾಮ ಮಾಡಿ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ವಿವಿಧ ಯೋಗಾಸನದ ಭಂಗಿಗಳನ್ನು ಮಾಡಿ ಸಂಭ್ರಮಿಸಿದರು. ಇವರೊಂದಿಗೆ ಉಪನ್ಯಾಸಕರು ಸಹ ಭಾಗವಹಿಸಿ ಪ್ರೇರಣೆ ನೀಡಿದರು.
ರಂಗಸ್ವಾಮಿ ಅವರು ಯೋಗದಿಂದ ಬಾಳ್ವೆ ಸುಗಮವಾಗಿ ನಡೆಯುತ್ತದೆ ,ಒಂದು ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಭಾರತವು ವಿಶ್ವಗುರುವಾಗಿ ನಿಲ್ಲಲು ಈ ಸನಾತನ ಯೋಗ ಪದ್ಧತಿ ಪ್ರಮುಖವಾಗಿ ಕಾರಣವಾಗಿದೆ ಎಂದು ಹೇಳಿದರು.
ನೂರ ಎಪ್ಪತೈದಕ್ಕೂ ಹೆಚ್ಚಿನ ದೇಶಗಳು ಇಂದು ಯೋಗಾಭ್ಯಾಸವನ್ನು ಮಾಡಿ ಸಂಭ್ರಮಿಸಿದೆ. ಈ ಸನಾತನ ಸಂಸ್ಕೃತಿಯನ್ನು, ಅದರ ಉಪಯೋಗವನ್ನು ನಾವು ಮನಗಂಡು ಆಚರಿಸಿ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕರುಗಳಾದ ಡಾ. ಟಿ.ಕೆ ರವಿ, ಸ್ವಾಮಿಗೌಡ, ಆದಿಲ್ ಹುಸೇನ್,ಪದ್ಮಾವತಿ ,ರೂಪ ,ಭವ್ಯ ,ಸುಮ ,ಮೀನಾ ವಸಂತಕುಮಾರಿ, ಸುಮಿತ್ರ ಭಾಗವಹಿಸಿದ್ದರು.ಡಾ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು.
