ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಎಚ್.ವಿ. ರಾಜೀವ್ ಸ್ನೇಹ ಬಳಗ ಹಾಗೂ ವಿಪ್ರ ಮಹಿಳಾ ಸಂಗಮದ ಸಂಯುಕ್ತಾಶ್ರಯದಲ್ಲಿ ಮೇ 1, 2 ಮತ್ತು 3 ರಂದು ವಿಪ್ರ ಮಹಿಳಾ ಉದ್ಯಮಿಗಳ ಬೃಹತ್ ವ್ಯಾಪಾರ ಮೇಳ ಹಮ್ಮಿಕೊಳ್ಳಲಾಗಿದೆ.
ಮೈಸೂರಿನ ಹಾರ್ಡ್ವಿಕ್ ಹೈಸ್ಕೂಲ್ ಮೈದಾನದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.
ಈ ವ್ಯಾಪಾರ ಮೇಳದ ಸೌರಭವನ್ನು ಸಾರುವ ಪೋಸ್ಟರ್ ಅನ್ನು ಮುಡಾ ಮಾಜಿ ಅಧ್ಯಕ್ಷರು, ವಿಪ್ರ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಾದ ಎಚ್.ವಿ. ರಾಜೀವ್ ಅವರು ಬಿಡುಗಡೆ ಮಾಡಿದರು.
ವಿಪ್ರ ಮಹಿಳಾ ಉದ್ಯಮಿಗಳಿಗೆ ವೇದಿಕೆ ಕಲ್ಪಿಸುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಈ ಮೇಳದ ಉದ್ದೇಶ ಎಂದು ಎಚ್.ವಿ. ರಾಜೀವ್ ತಿಳಿಸಿದರು.
ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಇಂತಹ ಮೇಳಗಳು ಸಮಾಜದ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ
ಜೆ.ಎಚ್. ಅನಿಲ್ ಕುಮಾರ್
ವಿಪ್ರ ಮಹಿಳಾ ಸಂಗಮ ಅಧ್ಯಕ್ಷರು
ಡಾ. ಲಕ್ಷ್ಮೀದೇವಿ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಎಸ್. ರಂಗನಾಥ್,ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ
ಸೌಭಾಗ್ಯ ಮೂರ್ತಿ,ಎಕೆಬಿಎಂಎಸ್
ರಾಜ್ಯ ಕಾರ್ಯಕಾರಿಣಿ ಸದಸ್ಯರು,
ಎನ್. ವಿಶ್ವನಾಥ್ ಎಂ.ಎಸ್. ಪ್ರಶಾಂತ್, ವಿಪ್ರ ಮುಖಂಡರಾದ ಮುಳ್ಳೂರು ಗುರುಪ್ರಸಾದ್, ಶೇಷಪ್ರಸಾದ್, ನಾಗಭೂಷಣ್, ರಘು ಭಾರ್ಗವ, ಅಶ್ವಿನ್ ಕೌಂಡಿನ್ಯ, ಶಾಂತಕ್ಕ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
