ಚಾಮರಾಜನಗರ: ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯ
ಸಿದ್ದಾರ್ಥ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟು ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ.
ಕಮಲೇಶ್, ಮದನ್, ಸ್ವಾಮಿ, ಅಭಿಲಾಷ, ನಂಜುಂಡಸ್ವಾಮಿ, ಪ್ರಕಾಶ್, ಕೃಷ್ಣ ಬಂಧಿತ ಆರೋಪಿಗಳು.
ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರಾದ ರೆಹನಾ ಬೇಗಂ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಠಾಣಾ ವ್ಯಾಪ್ತಿಯ ಸಿದ್ದಾರ್ಥ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿ ದಾಳಿ ಮಾಡಿದೆ.
ಆರೋಪಿಗಳಿಂದ ಇಸ್ಪೀಟ್ ಆಟ ಆಡಲು ಪಣವಾಗಿ ಕಟ್ಟಿದ್ದ ಹಣ 3,120 ರೂಗಳು ಹಾಗೂ ವಿವಿಧ ಮಾದರಿಯ 4 ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
