ಮೈಸೂರು: ಮೈಸೂರಿನಲ್ಲಿ
ಶ್ರೀ ಸಂಕಲ್ಪ ಸಂತುಷ್ಟ ಯಜ್ಞ ಶಾಲೆ ಉದ್ಘಾಟನೆ ಮಾಡಲಾಯಿತು.
ಯಾದವಗಿರಿ ಸಿ ಎಫ್ ಟಿ ಅರ್ ಐ ಪಕ್ಕದಲ್ಲಿ ಇರುವ ಉತ್ತರಾದಿಮಠದ ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದ ಪ್ರಾಣದೇವರ ದೇವಸ್ಥಾನದ ಆವರಣದಲ್ಲಿ
ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ. ರಾಜೀವ್ ಹಾಗೂ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಉದ್ಘಾಟನೆ ಮಾಡಿದರು.
ಉತ್ತರಾದಿಮಠದ ಈ ಕಾರ್ಯಕ್ರಮದ ಬಗ್ಗೆ ಅತೀವ ಸಂತೋಷ ವಾಗಿದೆ ಎಂದು ಶ್ರೀ ರಾಜೀವ್ ಅವರು ಶ್ಲಾಘಿಸಿದರು.
ಇನ್ನು ಮುಂದೆ ಪ್ರತಿಯೊಬ್ಬರು ಈ ಯಜ್ಞ ಶಾಲೆಯನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.
ಇದೆ ಸಂದರ್ಭಲ್ಲಿ AKBMS ಎ ಕೆ ಬಿ ಎಂ ಎಸ್ ರಾಜ್ಯಕರ್ಯಕಾರಿಣಿ ಸದಸ್ಯರಾದ ಎಸ್ ಬಿ ವಾಸುದೇವ ಮೂರ್ತಿ, ವಿಶ್ವಹಿಂದು ಪರಿಷತ್ ನಗರ ಅಧ್ಯಕ್ಷರಾದ ಮಹೇಶ್ ಕಾಮತ್, ಕೆ. ಬುಜಂಗ, ಪಾರಾಯಣದ ಶ್ರೀ ವಾಸುದೇವ ಮೂರ್ತಿ ಮತ್ತಿತರರು ಹಾಜರಿದ್ದರು.
ಪ್ರದಾನ ಅರ್ಚಕರಾದ ಶ್ರೀ ನಾಗಭೂಷಣ ಆಚಾರ್ಯ, ವ್ಯವಸ್ಥಾಪಕರಾದ ಶ್ರೀ ಪ್ರಮೋದ್ ಆಚಾರ್ಯ, ಪಂಡಿತ ಆದ್ಯ ಗೊವಿಂದಚಾರ್ಯ ನೇತೃತ್ವದಲ್ಲಿ ನವಗ್ರಹ ಹೋಮ, ಪವನಮಾನ ಹೋಮ ನೆರವೇರಿತು.
