ಮೈಸೂರು: ಮಹಿಳೆಯರು ಮಾತನಾಡುವ ಮಹಿಳಾಮಣಿ ಗಳಾಗದೆ ಸಾಧನೆ ಮಾಡುವಂತಾಗಬೇಕು ಎಂದು ಬೈರವಿ ಗೌಡತಿಯರ ಬಳಗದ ಅಧ್ಯಕ್ಷರಾದ ರೇವತಿ ಕೃಷ್ಣಪ್ಪ ಕರೆ ನೀಡಿದರು.
ನಗರದ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭೈರವಿ ಗೌಡ್ತಿಯರ ಬಳಗದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ಇಬ್ಬರು ಸಾಧಕರಾದ
ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿರುವ ಡಾಕ್ಟರ್ ಮೀನಾ ಮಂಜುನಾಥ್ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ವಿಜಯ ರಮೇಶ ಅವರಿಗೆ ಸನ್ಮಾನಿಸಿ ಗೌರವಿಸಿದ ವೇಳೆ ಅವರು ಮಾತನಾಡಿದರು.
ನೊಂದವರ ಬಾಳಿಗೆ ಬೆಳಕಾಗಿ ತೊಂದರೆಯಲ್ಲಿದ್ದ ಮಹಿಳೆಯರಿಗೆ ಸ್ಪಂದಿಸುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕು ಎಂದು ರೇವತಿ ಕೃಷ್ಣಪ್ಪ ಮಹಿಳೆಯರಿಗೆ ಸಲಹೆ ನೀಡಿದರು.
ಇದೇ ವೇಳೆ ಬೈರವಿ ವರ್ಷದ ಮಹಿಳೆ -2026 ರ್ಯಾಂಪ್ ವಾಕ್ ನಲ್ಲಿ ಸುಮಾರು 45 ಮಹಿಳೆಯರು ಭಾಗವಹಿಸಿದ್ದರು.
ಬೈರವಿ ವರ್ಷದ ಮಹಿಳೆಯ ಕಿರೀಟವನ್ನು ರೂಪ ದೇವೇಂದ್ರ ಅವರು ಮೂಡಿಗೆರೆಸಿಕೊಂಡರೆ, ರನ್ನರಪ್ ಹಾಗಿ ಅನಿತಾ ಮಾದೇಗೌಡ ಹಾಗೂ ಪೂಜಾ ಮತ್ತು ಚೈತ್ರ ಅವರು ಗೆದ್ದು ಕೊಂಡರು.
ಮುಖ್ಯ ತೀರ್ಪುಗಾರರಾಗಿ ಆಶಾ ಬಾಬು, ವೀಣಾ ಜಯಂತ್, ಬಿಂದು ಅವರು ಭಾಗವಹಿಸಿದ್ದರು.
ಬಳಗದ ಗೌರವ ಅಧ್ಯಕ್ಷರಾದ ರಾಧಾ ಲಂಕೇಗೌಡ ಹಾಗೂ ನಿರ್ದೇಶಕರುಗಳಾದ ಡಾ ಹೇಮಾನಂದೀಶ್, ಕೋಮಲ ವೆಂಕಟೇಶ್, ಸುಶೀಲಾ ಬಸವರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರುಗಳಾದ ವಸಂತಕುಮಾರಿ, ಪ್ರಮೀಳ,ಲಲಿತಾ ರಂಗನಾಥ್,ಮಣಿ, ಪ್ರಭಾ ನಾಗರಾಜ್, ಹೇಮಾ ರವಿ, ರೂಪ ಮಹೇಶ್, ವಿಜಯ ರಮೇಶ್, ಸಾವಿತ್ರಿ ಸೋಮಶೇಖರ್, ಲಕ್ಷ್ಮಿ ಹಾಗೂ ಭೈರವಿ ಗೌಡತಿಯರ ಬಳಗದ ಸದಸ್ಯರುಗಳು ಪಾಲ್ಗೊಂಡಿದ್ದರು.
