ಮೈಸೂರು: ಅಗ್ರಹಾರದಲ್ಲಿರುವ
ಅಭಿನವಶಂಕರಾಲಯ ಶಂಕರ ಮಠದಲ್ಲಿ
ಶಾಂಕರತತ್ವ ಪ್ರಸಾರ ಅಭಿಯಾನ ಮೈಸೂರು ಜಿಲ್ಲಾಘಟಕದ ವತಿಯಿಂದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿದಾನಂಗಳವರ 76ನೇ ವರ್ದಂತಿ ಮಹೋತ್ಸವ ಹಮ್ಮಿಕೊಳ್ಳಲಾಯಿತು.
ವಿದ್ವಾನ್ ಕಾರ್ತಿಕ್ ಎಸ್ ಅವರು ಶ್ರೀ ಭಾರತೀತೀರ್ಥ ಗುರುಗಳ ಬಗ್ಗೆ ಉಪನ್ಯಾಸ ನೀಡಿದರು.
ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿದಾನಂಗಳವರು ರಚಿಸಿರುವ ಸ್ತೋತ್ರಗಳನ್ನು ಸಮರ್ಪಣೆ ಮಾಡಲಾಯಿತು.
ಭಕ್ತ ವೃಂದದವರಾದ
ಹರೀಶ್, ನಟರಾಜ್, ಎಂ ಆರ್ ಬಾಲಕೃಷ್ಣ, ಗೋಪಾಲರಾವ್, ಶೇಷಾದ್ರಿ ಭಟ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ, ಜ್ಯೊತಿ, ಸತ್ಯವತಿ, ಸುಲೋಚನ, ರಶ್ಮಿ, ನಾಗಲಕ್ಷ್ಮಿ, ಶಶಿಕಲಾ ಮತ್ತಿತರರು ಪಾಲ್ಗೊಂಡಿದ್ದರು.
