ಬೆಳಗಾವಿ: ಬೆಳಗಾವಿ ನಗರದಲ್ಲಿ ಮಂಗಳವಾರ ಸಂಜೆ ಸುರಿದ ಬಿರುಸಿನ ಮಳೆಗೆ ತಂಪೇನೋ ಆಯಿತು ಜತೆಗೆ ಸಾಕಷ್ಟು ತೊಂದರೆ ಕೂಡಾ ಅನುಭವಿಸ ಬೇಕಾಯಿತು.
ಮಂಗಳವಾರ ಸಂಜೆ ಆರಂಭವಾದ ಭಿರುಸಿನ ಮಳೆ ಎರಡು ಗಂಟೆ ಎಡೆಬಿಡದೇ ಸುರಿದಿದೆ. ಇದರಿಂದ ರಸ್ತೆ, ಅಂಗಡಿಗಳು, ಮಾರ್ಕೆಟ್ ಪ್ರದೇಶದಲ್ಲಿ ನೀರು ತುಂಬಿ ರಸ್ತೆಯಲ್ಲೆಲ್ಲಾ ತರಕಾರಿ ತೇಲಾಡಿದವು.
ನಗರದ ಕಿಲ್ಲಾ ರಸ್ತೆ,ರವಿವಾರ ಪೇಟ್, ಬೆಲ್ಲ ಹಾಗೂ ಮೆಣಸಿನಕಾಯಿ ಮಾರುಕಟ್ಟೆ, ಕಾಂದಾ ಮಾರುಕಟ್ಟೆ, ಖಡೇಬಜಾರ್, ಮತ್ತಿತರ ಪ್ರದೇಶಗಳಲ್ಲಿ ನೀರು ಕೆರೆಯಂತೆ ನಿಂತಿತ್ತು.
ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಹೂಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ವ್ಯಾಪಾರಸ್ಥರು ಪರದಾಡಿದರು.
ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿಗಳು ತುಂಬಿ ರಸ್ತೆಗೆ ನುಗ್ಗಿ, ಅಂಗಡಿಗಳಿಗೆ ನುಗ್ಗಿದೆ.ಅಂಗಡಿಯವರು ಹೈರಾಣಾದರು.
