ಸುಡಾನ್: ಸುಡಾನ್ ನ ಪೂರ್ವ ಚಾಡ್ನಲ್ಲಿ ನೀರಿಗಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು 42 ಮಂದಿ ಮೃತಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ನೀರಿನ ಮೂಲದ ಹಕ್ಕುಗಳ ಬಗ್ಗೆ ಘರ್ಷಣೆಯಾಗಿದೆ.
ಸುಡಾನ್ ಗಡಿಯ ವಾಡಿ ಫಿರಾ ಪ್ರಾಂತ್ಯದ ಇಗೋಟ್ ಗ್ರಾಮಕ್ಕೆ ಚಾಡ್ನ ಉಪ ಪ್ರಧಾನ ಮಂತ್ರಿ ಲಿಮಾನೆ ಮಹಾಮತ್ ಭೇಟಿ ನೀಡಿದರು.
ಘರ್ಷಣೆಯಲ್ಲಿ 42 ಜನರು ಸಾವನ್ನಪ್ಪಿದ್ದು 10 ಜನರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಾಯಾಳುಗಳನ್ನು ಪ್ರಾಂತೀಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಪ್ರತೀಕಾರದ ಕಾವು ದೊಡ್ಡ ಮಟ್ಟದಲ್ಲಿಯೇ ಇತ್ತು ಈಗ ತಹಬದಿಗೆ ಬಂದಿದೆ ಎಂದು ಮಹಾಮತ್ ಹೇಳಿದ್ದಾರೆ
ಸೈನ್ಯ ತಕ್ಷಣ ಕ್ರಮ ಕೈಗೊಂಡು ಘರ್ಷಣೆಯನ್ನು ತಡೆದಿದೆ,ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಲವಾರು ತಿಂಗಳುಗಳಿಂದ, ಚಾಡ್ನ ಪೂರ್ವ ಪ್ರಾಂತ್ಯಗಳು ಸುಡಾನ್ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಲಾಯನ ಮಾಡುವ ನಿರಾಶ್ರಿತರಿಗೆ ಆಶ್ರಯ ನೀಡುತ್ತಿವೆ. ಇದು ಸಂಪನ್ಮೂಲಗಳು ಮತ್ತು ಭದ್ರತೆಯ ಮೇಲೆ ಒತ್ತಡ ಹೆಚ್ಚಿಸುತ್ತಿದೆ.
