ಮೈಸೂರು: ವಿಜಯನಗರ ಹೆಬ್ಬಾಳು ಎರಡನೇ ಹಂತದಲ್ಲಿರುವ ಸಾಧನ ಯೋಗ ಕೇಂದ್ರದಲ್ಲಿ ಗೌಡತಿಯರ ಬಳಗದಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಂಗಳಗೌರಿ ಯವರು ಕಾರ್ಯಕ್ರಮ ದಲ್ಲಿ ಪರಿಸರ ಉಳಿಸುವ ಬಗ್ಗೆ ಕುರಿತು ಮಾತಾಡಿದರು.
ನಾಲ್ಕು ವರ್ಷದಿಂದ ಬಳಗದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರಲಾಗುತ್ತಿದೆ ಬಡ ಮಕ್ಕಳಿಗೆ ಸಂಘದ ವತಿಯಿಂದ ಶಾಲಾ ಶುಲ್ಕ ಹಾಗೂ ಯೋಧರಿಗೆ ಸನ್ಮಾನ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಸೇವೆಯನ್ನು ಗೌಡತಿ ಬಳಗದಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
4 ನೆ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪರಿಸರ ಉಳಿಸಿ ಎನ್ನುವ ವಾಕ್ಯಡೊಡನೆ ಗಿಡ ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ನಾಗಮಣಿ ಸುಬ್ರಮಣ್ಯ, ರಾಜೇಶ್ವರಿ ನಾಗರಾಜ್, ರಾಣಿ ಮಹೇಶ್, ಸವಿತ ರವಿ ಕುಮಾರ್, ಆಶಾ ದೇವರಾಜ್, ಜಯಂತಿ, ಮೀನಾ ಸುಬ್ರಮಣ್ಯ,ಲಲಿತಕೃಷ್ಣೆ ಗೌಡ, ವನಜ, ಶಶಿಕಲಾ, ಸುವರ್ಣ ಲಕ್ಷ್ಮೇ ಗೌಡ ಹಾಗೂ ಗೌಡತಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
