ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ಹಾವು ಕಚ್ಚಿ14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ವೆಂಕಟೇಶ್ ಮೃತಪಟ್ಟ ಬಾಲಕ.
ಈತ ಹಸುವಿಗೆ ಹುಲ್ಲು ಹಾಕುವ ವೇಳೆ ಹಾವು ಕಚ್ಚಿದೆ,ಆದರೆ ಭಯದಿಂದ ಮನೆಯವರಿಗೆ ವಿಷಯ ತಿಳಿಸಿಲ್ಲ.
ಹಾವು ಕಚ್ಚಿದ ಬಲಗೈ ಬೆರಳಿಗೆ ಪ್ಲಾಸ್ಟರ್ ಸುತ್ತಿಕೊಂಡು ಸುಮ್ಮನಾಗಿಬಿಟ್ಟಿದ್ದಾನೆ. ಆದರೆ ಕೆಲಹೊತ್ತಲ್ಲೇ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ತಕ್ಷಣ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗೆದೆ,ಸಮಯ ಮೀರಿದ್ದರಿಂದ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
