ಮೈಸೂರು: ಮೈಸೂರಿನ ಆರ್ ಗೇಟ್ ಸರ್ಕಲ್ ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಯುದ್ದ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ವಾಟಾಳ್ ಮಾತನಾಡಿ,ಯುದ್ದದಿಂದ ಸಾವುನೋವು ಹೆಚ್ಚಾಗುತ್ತದೆ.ಶಾಂತಿ ಇಲ್ಲದಂತಾಗುತ್ತದೆ.ಇತ್ತ ಭಾರತದಲ್ಲಿ ತೈಲ ಸಿಗದಂತಾಗಿದೆ.ಆದ್ದರಿಂದ ಯುದ್ದ ನಿಲ್ಲಿಸಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ,ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಶಂಕರ್, ಸಿಂದುವಳ್ಳಿ ಶಿವಕುಮಾರ್, ಶಿವರಾಂ, ರಾಧಾಕೃಷ್ಣ , ದರ್ಶನ್ ಗೌಡ, ರವೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
