ಹುಣಸೂರು: ದೊಡ್ಡ ಹುಣಸೂರು ಮತ್ತು ಚಿಕ್ಕ ಹುಣಸೂರು ಗ್ರಾಮಸ್ಥರು ಸೇರಿ ಪುರಾಣ ಪ್ರಸಿದ್ಧ ಬನ್ನಂತಮ್ಮ ದೇವಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ಬನ್ನಂತಮ್ಮ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ,ಅಭಿಷೇಕ ನೆರವೇರಿಸಿ ಅದ್ಭುತವಾಗಿ ಹೂವಿನ ಅಲಂಕಾರ ಮಾಡಲಾಯಿತು.
ನಂತರ ತೀರ್ಥ,ಪ್ರಸಾದ ವಿನಿಯೋಗ ಮಾಡಿ ಭಕ್ತರಿಗೆ ಅನ್ನದಾನ ಮಾಡಲಾಯಿತು.
ಇದೇ ವೇಳೆ ದೇವಿ ಹಬ್ಬಕ್ಕೆ ಸಹಕರಿಸಿದ ಊರಿನ ಮುಖಂಡರು,
ಯಜಮಾನರುಗಳನ್ನು ಗೌರವಿಸಲಾಯಿತು.
ಬನ್ನಂತಮ್ಮ ದೇವಿಯ 55 ನೆ ವಾರ್ಷಿಕೋತ್ಸವ ಕೂಡಾ ಇದ್ದುದರಿಂದ ಎರಡೂ ಊರಿನ ಜನತೆ ಯಜಮಾನರು,ಮುಖಂಡರಿಗೆ ಸಹಕಾರ ನೀಡಿ ಹಬ್ಬ ಇನ್ನಷ್ಟು ವೈಭವಯುತವಾಗುವಂತೆ ಮಾಡಿದರು.
