ಟೆಹ್ರಾನ್: ಅಮೆರಿಕದ ಮಿತ್ರರಾಷ್ಟ್ರಗಳಲ್ಲಿನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರೆದಿದ್ದು,ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ನ ಅಣುಸ್ಥಾವರಗಳ ಮೇಲೆ ದಾಳಿ ಮಾಡಿವೆ.
ಇರಾನ್ನ ಬುಶೆಹರ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿನಡೆಸಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ದಕ್ಷಿಣ ಇರಾನ್ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಶನಿವಾರ ಅಮೆರಿಕ-ಇಸ್ರೇಲ್ ದಾಳಿ ನಡೆಸಿದೆ. ಇದಕ್ಕೂ ಮೊದಲು, ಇರಾನ್ನ ನೈಋತ್ಯ ಖುಜೆಸ್ತಾನ್ ಪ್ರಾಂತ್ಯದ ಮಹ್ಶಹರ್ ಪೆಟ್ರೋಕೆಮಿಕಲ್ ವಲಯದ ಮೇಲೆ ನಡೆದಿದ್ದ ದಾಳಿಯಲ್ಲಿ ಐವರು ಗಾಯಗೊಂಡಿದ್ದರು.
ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಆವರಣದ ಬಳಿ ಒಂದು ಕ್ಷಿಪಣಿ ಅಪ್ಪಳಿಸಿದ ಬಗ್ಗೆ ಇರಾನ್ನಿಂದ ಮಾಹಿತಿ ಪಡೆಯಲಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಹೇಳಿದೆ.
ಸೈಟ್ನ ಭೌತಿಕ ರಕ್ಷಣಾ ಸಿಬ್ಬಂದಿಗಳಲ್ಲಿ ಒಬ್ಬರು ‘ಪ್ರೊಜೆಕ್ಟೈಲ್ ತುಣುಕಿನಿಂದ’ ಸಾವನ್ನಪ್ಪಿದ್ದಾರೆ.
ಈ ದಾಳಿಯಿಂದ ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ವಿಕಿರಣ ಸೋರಿಕೆಯಾಗಿಲ್ಲ. ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳ ವರದಿಯಾಗಿಲ್ಲ.
ಅಂದಹಾಗೆ ಒಂದು ತಿಂಗಳ ಹಿಂದೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಆಪರೇಷನ್ ಫ್ಯೂರಿ ಹೆಸರಿನಲ್ಲಿ ಸೇನಾ ದಾಳಿ ನಡೆಸಿ ಅಲ್ಲಿನ ಸುಪ್ರೀಂ ನಾಯಕ ಅಲಿ ಖಮೇನಿಯನ್ನು ಹತ್ಯೆ ಮಾಡಿತ್ತು.
