ಮೈಸೂರು: ನಗರ ಸಾರಿಗೆ ಬಸ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿದ್ದ ಸುಮಾರು ೧೮ ಲಕ್ಷ ರೂ. ಮೌಲ್ಯದ ೨೬೨ ಗ್ರಾಂ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಡೆದಿದೆ.
ರಾಮಕೃಷ್ಣ ನಗರ ನಿವಾಸಿ ಹೇಮಲತಾ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ನಗರದ ಅಶೋಕ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಅವರು ವಾಪಸ್ ಪಡೆದಿದ್ದಾರೆ.
ಮಧ್ಯಾಹ್ನ ೨.೩೦ರ ವೇಳೆಯಲ್ಲಿ ಅಶೋಕ ವೃತ್ತದ ಬಸ್ ತಂಗುದಾಣದಿಂದ ರಾಮಕೃಷ್ಣನಗರಕ್ಕೆ ತೆರಳಲು ನಗರ ಸಾರಿಗೆ ಬಸ್ ಹತ್ತಿದ್ದಾರೆ. ಈ ಸಮಯದಲ್ಲಿ ಕಳ್ಳರು
ಮಹಿಳೆಯ ಬ್ಯಾಗ್ನಲ್ಲಿದ್ದ ಆಭರಣಗಳನ್ನು ಕದ್ದಿದ್ದಾರೆ.
ಬಸ್ನಿಂದ ಇಳಿದ ನಂತರ ಹೇಮಲತಾ ಅವರು ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
