ಮೈಸೂರು: ಮೈಸೂರಿನ ಆದರ್ಶ ಸೇವಾ ಸಂಘದಿಂದ 2026ನೇ ಸಾಲಿಗೆ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು,ಅರ್ಜಿ ಆಹ್ವಾನಿಸಲಾಗಿದೆ.
2026ನೇ ವರ್ಷದಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ., ಅಂತಿಮ ಡಿಪ್ಲೋಮಾ ಪರೀಕ್ಷೆಗಳಲ್ಲಿ ಶೇ 90 ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ ಎಲ್ಲಾ ರೀತಿಯ ಅಂತಿಮ ವರ್ಷದ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಮೊದಲ ಬಾರಿಗೆ ಡಿಸ್ಟಿಂಕ್ಷನ್ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವ ತ್ರಿಮತಸ್ಥ ಬ್ರಾಹ್ಮಣ ಆದರ್ಶ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಂಘದ ಕಚೇರಿಯಲ್ಲಿ 26 ರಿಂದ 10.6.2026ರೊಳಗೆ ಸಂಜೆ 5 ರಿಂದ 6 ಗಂಟೆಯೊಳಗೆ ನಿಗದಿತ ಅರ್ಜಿಯನ್ನು ಪಡೆಯಬಹುದಾಗಿದೆ.
ಭರ್ತಿಮಾಡಿದ ಅರ್ಜಿಯನ್ನು ದೃಢೀಕೃತ ಅಂಕಪಟ್ಟಿ, ಟಿ.ಸಿ. ಹಾಗೂ ದಾಖಲೆಗಳೊಂದಿಗೆ ಸಂಘಕ್ಕೆ ಜೂನ್ 15 ಸಲ್ಲಿಸಬೇಕಿದೆ.
ಹೆಚ್ಚಿನ ವಿವರಗಳಿಗೆ 9187469464 / 9480166274 / 7411193216 / 9845676773 ಸಂಪರ್ಕಿಸ ಬಹುದಾಗಿದೆ ಎಂದು ಆದರ್ಶ ಸೇವಾ ಸಂಘದ ಪರವಾಗಿ
ಕಾರ್ಯದರ್ಶಿ ಆರ್.ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
