ಮೈಸೂರು: ಶ್ರೀ ಅವಧೂತ ದತ್ತ ಪೀಠ,
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೪ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ ೨೮ನೇ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಮೇ 24 ರ ಭಾನುವಾರದಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.ಗಣ್ಯಾತಿಗಣ್ಯರು,ಪೀಠಾಧಿಪತಿಗಳು ಆಶ್ರಮಕ್ಕೆ ಭೇಟಿ ನೀಡಿ ಗಣಪತಿ ಶ್ರೀಗಳಿಗೆ ಶುಭ ಕೋರಿದ್ದಾರೆ.
ಇಂದು ಬುಧವಾರ ಅಧಿಕ ಜೇಷ್ಠ ಶುದ್ಧ ಏಕಾದಶಿ ಪ್ರಯುಕ್ತ
ಬೆಳಗ್ಗೆ ೭ ಗಂಟೆಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರಾಭಿಷೇಕ ನೆರವೇರಿಸಲಾಯಿತು
10 ಗಂಟೆಗೆ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆಯನ್ನು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಶಾಸ್ತ್ರೋಕ್ತ ವಾಗಿ ನೆರವೇರಿಸಲಾಯಿತು.
ನಂತರ ಚೈತನ್ಯಾರ್ಚನೆ – ದತ್ತ ಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ದಿಂದ ಕಾಶ್ಮೀರದ ವರೆಗೆ ಅರ್ಹರನ್ನ ಗುರುತಿಸಿ ದತ್ತ ಪೀಠ ಪ್ರಶಸ್ತಿ ನೀಡಿದ್ದು ವಿಶೇಷ.
ವೇದ ನಿಧಿ- ಶ್ರೀ ವಿ. ಜಂಬುನಾಥ ಘನಪಾಠಿ.
ಇವರು ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು.ವೇದಾಂಗ ಪ್ರವೀಣರು.ಬಹಳ ವರ್ಷ ಮೈಸೂರಿನಲ್ಲೂ ಇದ್ದರು.
ಶಾಸ್ತ್ರ ನಿಧಿ – ಶ್ರೀ ಕುಪ್ಪಾ ವಿಶ್ವನಾಥ ಶರ್ಮ.ಇವರು ತಿರುಪತಿಯವರು.ವೇದಾಂತ ಶಾಸ್ತ್ರ, ಭಗವದ್ಗೀತಾ ಪಾರಂಗತರು.ವ್ಯಾಕರಣ ಪಂಡಿತರು.ಭಕ್ತಿಮಾಲ ಮ್ಯಾಗಜೀನ್ ಎಡಿಟರ್.ಎರಡು ಪಿ ಹೆಚ್ ಡಿ ಪಡೆದಿರುವುದು ವಿಶೇಷ.
ನಾದ ನಿಧಿ- ವಿದ್ವಾನ್ ಸುರೇಶ್ ವೈದ್ಯನಾಥನ್.ಇವರು ತಮಿಳುನಾಡಿನ ಚನ್ನೈ ನವರು.ಘಟಂ ಹಾಗೂ ಕರ್ನಾಟಕ ಸಂಗೀತ ದಲ್ಲಿ ಪ್ರಸಿದ್ದರು.ದತ್ತಪೀಠದ ಆಸ್ತಾನ ವಿದ್ವಾನರು.
ಪ್ರವಚನ ಚಕ್ರವರ್ತಿ- ಶ್ರೀ ಸಾಮವೇದಮ್ ಷಣ್ಮುಖ ಶರ್ಮ.ಇವರು ಹೈದರಾಬಾದ್ ನವರು.ಕಂಚಿ ಕಾಮಕೋಟಿ ವಿದ್ಯಾಪೀಠಮ್ ಆಸ್ತಾನ ವಿದ್ವಾನರು.ಸುಮಾರು 25 ದೇಶಗಳಲ್ಲಿ ಪ್ರವಚನ ನೀಡಿದ್ದಾರೆ.ಬ್ರಹ್ಮಸೂತ್ರ, ಭಗವದ್ಗೀತ ಪ್ರವೀಣರು.
ಧರ್ಮ ಬಂಧು- ಶ್ರೀ ರವೀಂದರ್ ಪಂಡಿತ.ಇವರು ಕಾಶ್ಮೀರಿ ಪಂಡಿತರು. ಭರತ ಬಂಧು ಎಂದೇ ಪ್ರತೀತರು.ಸನಾತನ ಧರ್ಮ ಪ್ರಚಾರಕರು.ಶಾರದಾಪೀಠ ಉಳಿವಿಗೆ ಶ್ರಮಿಸಿದವರು.
ಸಸ್ಯ ಬಂಧು- ಶ್ರೀಮತಿ ಅನುಪಮ ವೇದಾಚಲ.ಇವರು ಕರ್ನಾಟಕದವರು.
ಬೆಂಗಳೂರಿನ ವಾಸಿ. ಬೋನ್ಸಾಯ್ ಆರ್ಟ್ ನಲ್ಲಿ ಪ್ರಸಿದ್ದರಾಗಿದ್ದಾರೆ.ವಿದೇಶಗಳಲ್ಲೂ ಬೋನ್ಸಾಯ್ ಕಲೆ ಬಗ್ಗೆ ಪ್ರಚುರ ಪಡಿಸಿದ್ದಾರೆ.
ಚಾತುರ್ಮಾಸ್ಯ: ಅವಧೂತ ದತ್ತಪೀಠದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು 29-7-26 ರಿಂದ 26-9-26 ರ ವರೆಗೆ ಚಾತುರ್ಮಾಸ್ಯ ವ್ರತ ದೀಕ್ಷಾ ಮಹೋತ್ಸವ ಕೈಗೊಂಡಿದ್ದು,ಅದರ ಆಹ್ವನ ಪತ್ರಿಕೆಯನ್ನು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಬಿಡುಗಡೆ ಮಾಡಿದರು.
ಈ ವೇಳೆ ಹೆಚ್.ವಿ.ರಾಜೀವ್, ಡಿ.ಟಿ.ಪ್ರಕಾಶ್ ಮತ್ತಿತರರು ಹಾಜರಿದ್ದರು.
ಜೀವನದ ಸಾಧನೆಗೆ ವಿದ್ಯೆ ಅತ್ಯಗತ್ಯ:
ನಾದಮಂಟಪದಲ್ಲಿ ದತ್ತ ಪೀಠ ಪ್ರಶಸ್ತಿ ಪ್ರದಾನ ಮಾಡಿದ ನಂತರ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಗಣಪತಿ ಶ್ರೀಗಳು,ಜೀವನದ ಸಾಧನೆಗೆ ವಿದ್ಯೆ ಅತ್ಯಗತ್ಯ ಎಂದು ನುಡಿದರು.
ನಾವೆಲ್ಲ ಭಗವಂತನನ್ನ ಬಗೆ,ಬಗೆಯ ಹೂಗಳಿಂದ ಪೂಜಿಸುತ್ತೇವೆ.ನಮ್ಮ ವಾಂಛಗೆ ಪ್ರಾರ್ಥನೆ ಸಲ್ಲಿಸುತ್ತೇವೆ.ಅದು ಸರಿಯಾದುದಲ್ಲ.ಮೊದಲು ಸ್ವಯಂ ಜ್ಞಾನ,ಸ್ವಯಂ ಭಕ್ತಿ,ಸ್ವಯಂ ವೈರಾಗ್ಯವನ್ನು ಭಗವಂತನಲ್ಲಿ ಕೇಳಬೇಕು.ಮನಸ್ಸಿನ ಶುದ್ಧತೆ,ಶಾಂತಿಗಾಗಿ ಪ್ರಾರ್ಥಿಸಿ ಎಂದು ಶ್ರೀಗಳು ತಿಳಿಹೇಳಿದರು.
ಎ ಐ ಈಗ ಬಂದದ್ದೇನಲ್ಲ,ಹಿಂದೆಯೇ ಇತ್ತು.ಸತಿ ಸಾವಿತ್ರಿ ಪತಿ ನಿಧನ ಹೊಂದಿದಾಗ ಎಐ ಉಪಯೋಗಿಸಿದ್ದಳು.ನನಗೆ ಮಕ್ಕಳು ಬೇಕು ವರ ಕೊಡು ಎಂದು ಪ್ರಾರ್ಥಿಸಿದಳು.ಅಂದರೆ ಗಂಡನಿಲ್ಲದೆ ಮಕ್ಕಳು ಜನಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಜಾಣೆ ಸಾವಿತ್ರಿ ಬುದ್ದಿ ಉಪಯೋಗಿಸಿ ಆ ರೀತಿ ವರ ಕೇಳಿದ್ದಳು ಎಂದು ಗಣಪತಿ ಶ್ರೀ ಉದಾಹರಣೆ ಸಹಿತ ತಿಳಿಸಿದರು.

