ಮೈಸೂರು: ಮೈಸೂರಿನ ಸರಸ್ವತಿಪುರಂ, ಶ್ರೀ ಕೃಷ್ಣದಾಮದಲ್ಲಿ ನಾಳೆ ಸಂಜೆ ವಿದುಷಿ ತೃಪ್ತಿ ಅನೀಶ್ ಅವರಿಂದ ನಾಟ್ಯಾರ್ಪಣಂ ಮತ್ತು ಪ್ರಖರ ವಾಗ್ಮಿ ರವೀಂದ್ರ ಜೋಶಿ ಅವರಿಂದ ಪ್ರಚಲಿತ ಭಾರತ ಒಂದು ವಿಶ್ಲೇಷಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ನಾಟ್ಯಾರ್ಪಣಂ ಮತ್ತು ಪ್ರಚಲಿತ ಭಾರತ ಒಂದು ವಿಶ್ಲೇಷಣೆ ಕಾರ್ಯಕ್ರಮ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಶನಿವಾರ ಸಂಜೆ 7 ಗಂಟೆಗೆ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ರವಿಶಾಸ್ತ್ರಿ ತಿಳಿಸಿದ್ದಾರೆ.
