ಮೈಸೂರು: ಮೈಸೂರಿನ ಹೂಟಗಳ್ಳಿ ಮಾರಿಗುಡಿ ದೇವಸ್ಥಾನದಿಂದ ಪ್ರಾಂಭವಾದ ಶೋಭಾಯಾತ್ರೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರು, ವಿವಿದ ಸಮಾಜದ ಜನರು ಹಾಗು,ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಲ್ಲಲ್ಲಿ ಚಂಡೆ ವಾದ್ಯಕ್ಕೆ ನೃತ್ಯ ಮಾಡಿಕೊಂಡು ಜನರು ಜಯ ಘೋಷ ಮಾಡಿದ್ದು ವಿಶೇವಾಗಿತ್ತು.
ಶೋಭಾ ಯಾತ್ರೆಯ ಕೊನೆಯಲ್ಲಿ ಭಾರತ ಮಾತ ಫೋಟೋವನ್ನು ರಥದಲ್ಲಿ ಇಟ್ಟು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಮುಖ್ಯ ವೃತ್ತಗಳಲ್ಲಿ ಜನರು ಭಾರತ ಮಾತೆಯ ರಥಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು.
ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು, ನಂತರ ಶ್ರೀಗಳು ತಮ್ಮ ವಾಗ್ಜರಿಯ ಮೂಲಕ ನೆರೆದಿದ್ದವರನ್ನು ಮಂತ್ರಮುಗ್ದರಾಗಿಸಿದರು.
ಅಖಿಲ ಭಾರತ ಕುಟುಂಬ ಪ್ರಬೋಧನ್ ಟೂಳಿ ಸದಸ್ಯರಾದ ಕಜ್ಜಂಪಾಡಿ ಸುಬ್ರಮಣ್ಯ ಭಟ್ ತಮ್ಮ ಪ್ರಖರ ಭಾಷಣದಿಂದ ಜನಮಾನಸವನ್ನು ಗೆದ್ದರು.
ನೂರಾರು ಮಂದಿ ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
